ಬೆಂಗಳೂರು: ಒಕ್ಕೂಟ ವ್ಯವಸ್ಥೆಗೆ ಉದ್ಧವ್ ಠಾಕ್ರೆ ಹೇಳಿಕೆಯಿಂದ ಧಕ್ಕೆಯಾಗಿದೆ. ಕನ್ನಡ ಧ್ವಜ ದಹಿಸಿ ಎಂಇಎಸ್ ಪುಂಡಾಟಿಕೆ ಮೆರೆದಿದೆ. ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಹೇಯ ಕೃತ್ಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ) ಬಣದ ಕಾರ್ಯಕರ್ತರು ಯಲಹಂಕದ ಕೋಗಿಲು ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಕರವೇ ಕಾರ್ಯಕರ್ತರು ಶಿವಸೇನೆ, ಎಂಇಎಸ್ ಪುಂಡಾಟಿಕೆ ಹಾಗೂ ಉದ್ಧವ್ ಠಾಕ್ರೆಯ ಉದ್ಧಟತನದ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಕೂಡಲೇ ಸರ್ಕಾರ ಈ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಕರವೇ ಮುಖಂಡ ಯಲಹಂಕ ಗುರು ಮಾತನಾಡಿ, ಮುಖ್ಯಮಂತ್ರಿಗಳು ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿರುವ ದುಷ್ಟರ ವಿರುದ್ದ ಗೂಂಡಾ ಆಕ್ಟ್ ನಡಿ ಕ್ರಮ ಜರುಗಿಸಬೇಕು ಹಾಗೂ ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.
Kshetra Samachara
20/12/2021 01:49 pm