ದೊಡ್ಡಬಳ್ಳಾಪುರ : "ರಾಜಕೀಯ ಮುತ್ಸದ್ಧಿ ಆರ್. ಎಲ್. ಜಾಲಪ್ಪನವರು ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಾಗಿದ್ದವರು. ಸಹಕಾರ ಕ್ಷೇತ್ರದ ಪಿತಾಮಹರೂ ಹೌದು. ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲದಿರುವುದು ನೋವು ತಂದಿದೆ. ಕಂದಾಯ ಸಚಿವರಾಗಿ ಕ್ರಾಂತಿಕಾರಕ ಕೆಲಸಗಳನ್ನು ಮಾಡಿದ್ದಾರೆ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಅನುಯಾಯಿಯಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಆರ್.ಎಲ್.ಜಾಲಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
Kshetra Samachara
18/12/2021 04:18 pm