ಕೆ.ಆರ್. ಪುರ: ಭೂ ಹಗರಣ ಆರೋಪದಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳೆ ಸುಳ್ಳು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಮಾತೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
2013 ರಲ್ಲಿ ಎಕರೆಗೆ 18 ಲಕ್ಷ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ. ಆದರೆ ಈಗ ಮಾಡುತ್ತಿರೋ ಆರೋಪದಲ್ಲಿ ಯಾವುದೇ ಸತ್ಯ ಇಲ್ಲವೇ ಇಲ್ಲ. ನಾನು ಏನೂ ತಪ್ಪೂ ಮಾಡಿಲ್ಲ.ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಭೈರತಿ ಬಸವರಾಜ್.
ಈ ವಿಚಾರದ ಬಗ್ಗೆ ಜಮೀನು ಮಾಲೀಕರು ಮತ್ತು ಕಲ್ಕೆರೆ ಗ್ರಾಮದ ಜನರ ಸಮ್ಮುಖವೇ ವಿಚಾರಣೆ ನಡೆಯಲಿ. ನ್ಯಾಯದ ಮುಂದೆ ನಾನು ತಲೆ ಬಾಗುತ್ತೇನೆ.ನನ್ನ ಏಳಿಗೆ ಸಹಿಸದೇ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ ಸಚಿವ ಭೈರತಿ ಬಸವರಾಜ್.
Kshetra Samachara
18/12/2021 03:27 pm