ದೊಡ್ಡಬಳ್ಳಾಪುರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆರ್ ಎಲ್ ಜಾಲಪ್ಪ (97) ನಿನ್ನೆ ಕೋಲಾರ ಆಸ್ಪತ್ರೆಯಲ್ಲಿ ನಿಧನರಾದರು, ಅವರ ಅಂತಿಮ ದರ್ಶನವನ್ನ ಸ್ವಗ್ರಾಮ ತೂಬಗೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ,
ಜಾಲಪ್ಪನವರ ಅಂತಿಮ ದರ್ಶನವನ್ನ ದೊಡ್ಡಬಳ್ಳಾಪುರ ಶಾಸಕರ ಟಿ.ವೆಂಕಟರಮಣಯ್ಯ, ದೇವನಹಳ್ಳಿ ಶಾಸಕರಾದ ನಿಸರ್ಗ ನಾರಯಣಸ್ವಾಮಿ, ಮಾಜಿ ಶಾಸಕ ವರ್ತೂರು ಪ್ರಕಾಶ್ ಪಡೆದರು, ಸಂಜೆ ದೊಡ್ಡಬಳ್ಳಾಪುರ ನಗರದ ಜಾಲಪ್ಪ ತಾಂತ್ರಿಕ ಕಾಲೇಜ್ ಅವರಣದಲ್ಲಿ ಅಂತಿಮ ಕಾರ್ಯ ನೆರವೆರಲಿದ್ದು, ತೂಬಗೆರೆಯಿಂದ ಜಾಲಪ್ಪ ಕಾಲೇಜ್ ವರೆಗೂ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗುವುದು, ಮೆರವಣಿಗೆಗಾಗಿ ವಿಶೇಷ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ.
Kshetra Samachara
18/12/2021 11:13 am