ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಸಾರಿಗೆ ನೌಕರರ ಮರುನೇಮಕ ಒತ್ತಾಯಿಸಿ ಪಾದಯಾತ್ರೆ

ನೆಲಮಂಗಲ: 2021ರ ಏಪ್ರಿಲ್ ತಿಂಗಳಲ್ಲಿ ನಡೆದ ರಸ್ತೆ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿದ್ದ ಕೆಲ ನೌಕರರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ರೆ, ಇನ್ನೂ ಕೆಲವರನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮರುನೇಮಕಕ್ಕೆ ಅದೇಶ ಮಾಡಬೇಕೆಂದು ಬಳ್ಳಾರಿಯಿಂದ ವಿಧಾನಸೌಧದವರೆಗೂ

200ಕ್ಕೂ ಹೆಚ್ಚು ಸಾರಿಗೆ ನೌಕರರು ಪಾದಯಾತ್ರೆ ನಡೆಸಿದರು.

ಸಾರಿಗೆ ನೌಕರರ ಈ ಪಾದಯಾತ್ರೆ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ಪೇಟೆಗೆ ತಲುಪಿದೆ. ಅಲ್ಲಿ ರಾತ್ರಿ ವಾಸ್ತವ್ಯ

ಹೂಡಿ, ಮತ್ತೆ ನಾಳೆ ಬೆಳಿಗ್ಗೆ ನೆಲಮಂಗಲ ಮೂಲಕ ಬೆಂಗಳೂರಿನತ್ತ ಪಾದಯಾತ್ರೆ ಮುಂದುವರೆಯಲಿದೆ.

Edited By : Nagesh Gaonkar
Kshetra Samachara

Kshetra Samachara

05/12/2021 10:38 pm

Cinque Terre

534

Cinque Terre

0

ಸಂಬಂಧಿತ ಸುದ್ದಿ