ಬೆಂಗಳೂರು:ಕಾಂಗ್ರೆಸ್ ಬಹಿರಂಗ ಸಭೆಯಲ್ಲಿಯೇ ಮಾಜಿ ಸಚಿವ ಹೆಚ್.ಆಂಜನೇಯ ಅವರ ಪ್ಯಾಂಟ್ ಕಳಿಚಿ ಬಿದ್ದ ಘಟನೆ ಇಂದು ಅರಮನೆ ಮೈದಾನದಲ್ಲಿ ನಡೆದಿದೆ.
ಹೌದು.ಇಲ್ಲಿ ಅಲ್ಪ ಸಂಖ್ಯಾತರ ಪದಗ್ರಹಣ ಕಾರ್ಯಕ್ರಮ ನಡೆದಿತ್ತು. ಇಲ್ಲಿಗೆ ಆಗಮಿಸಿದ್ದ ಹೆಚ್.ಆಂಜನೇಯ ಅವರು ಸಿದ್ದರಾಮಯ್ಯನವರ ಜೊತೆಗೆ ವೇದಿಕೆಯ ಮೇಲೂ ಹತ್ತಿದ್ದರು. ಅಬ್ದುಲ್ ಜಬ್ಬಾರ್ ಅವರಿಗೆ ಅಧಿಕಾರ ಹಸ್ತಾಂತರ ಸಮಯದಲ್ಲಿಯೇ ಮಾಜಿ ಸಚಿವ ಹೆಚ್.ಆಂಜನೇಯ ಅವರ ಪ್ಯಾಂಟ್ ಉದುರಿ ಬಿದ್ದಿದೆ.
ಸದ್ದು-ಗದ್ದಲದ ಮಧ್ಯೆ ಈ ಒಂದು ಘಟನೆ ನಡೆದು ಹೋಗಿದೆ.ಆದರೂ ಗಾಬರಿಯಾದ ಆಂಜನೇಯ ಅವರು ತಕ್ಷಣವೇ ಪ್ಯಾಂಟ್ ಏರಿಸಿಕೊಂಡು ಸುಧಾರಿಸಿಕೊಂಡಿದ್ದಾರೆ.ಆದರೆ ಆಂಜನೇಯ ಅವರ ಪ್ಯಾಂಟ್ ಉದುರಿದ ಘಟನೆ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿದೆ.
Kshetra Samachara
16/11/2021 06:09 pm