ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಿದ್ರಾಮಯ್ಯನವರೇ ವೀರಶೈವ ಸಮುದಾಯ ಚೂರು ಚೂರು ಮಾಡಿದ್ದು ಸಮಾಧಾನವಾಗಿಲ್ವೆ?

ಬೆಂಗಳೂರು: ವೀರ ಶೈವ ಲಿಂಗಾಯತ ಅಂತ ಕರ್ನಾಟಕದಲ್ಲಿ ಜಾತಿಯನ್ನೂ ಚೂರು ಚೂರು ಮಾಡಿದಿರಿ. ಅದಕ್ಕೇನೆ ನಿಮಗೆ ಅದೇ ಲಿಂಗಾಯತರು ಕೈಕೊಟ್ಟರು ಎಂದು ಸಿದ್ದರಾಮಯ್ಯನವರನ್ನ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರ ಹೇಳಿಕೆಗಳನ್ನ ತೀವ್ರವಾಗಿಯೇ ಟೀಕಿಸಿರೋ ಈಶ್ವರಪ್ಪ ಅವ್ರು,ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಪ್ರತಿ ಪಕ್ಷವಾಗಿ ಹೇಳಿಕೆ ಕೋಡೋದ್ರಲ್ಲೇ ಇದೀರಾ.ಆದರೆ, ನಾವು ಹೇಳಿಕೆ ಕೊಡೋದಿಲ್ಲ ಬಿಡಿ. ನಾವು ಜನರ ಮಧ್ಯ ಇದ್ದೀವಿ. ಅದಕ್ಕಾಗಿಯೇ ಜನ ನಮ್ಮನ್ನ ಗೆಲ್ಲಿಸುತ್ತಿದ್ದಾರೆ. ಆದರೆ ನೀವು ತಪ್ಪು ಮಾಡಿದ್ದಕ್ಕೆ ಜನ ನಿಮ್ಮನ್ನ ಹೊರಗೆ ಹಾಕಿದ್ದಾರೆ ಎಂದು ಚುಚ್ಚಿದ್ದಾರೆ ಸಚಿವ ಈಶ್ವರಪ್ಪ.

ಇದರ ಮಧ್ಯೆ ನೀವು ಜಾತಿಯನ್ನ ತಂದ್ರಿ,ವೀರ ಶೈವ ಲಿಂಗಾಯತ ಅಂತ ಕರ್ನಾಟಕದಲ್ಲಿ ಜಾತಿಯನ್ನೂ ಚೂರು ಚೂರು ಮಾಡಿದಿರಿ.ಅದೇ ಲಿಂಗಾಯತರೇ ನಿಮಗೆ ಕೈಕೊಟ್ಟರು ಅಂತಲೇ ಸಿದ್ದರಾಮಯ್ಯನವರನ್ನ ಚೇಡಿಸಿದ್ದಾರೆ ಈಶ್ವರಪ್ಪ.

Edited By : Manjunath H D
Kshetra Samachara

Kshetra Samachara

15/11/2021 06:24 pm

Cinque Terre

288

Cinque Terre

0

ಸಂಬಂಧಿತ ಸುದ್ದಿ