ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯನವರ ಹೇಳಿಕೆಗಳಿಗೆ ತಿರುಗೇಟು ನೀಡಿರೋ ಸಚಿವ ಆರ್.ಅಶೋಕ್,ಸಿದ್ಧರಾಮಯ್ಯನವರು ಬುಟ್ಟಿಯಲ್ಲಿ ಹಾವಿದೆ ಹಾವಿದೆ ಅಂತಿದ್ದಾರೆ. ಆದರೆ,ಹಾವನ್ನೇ ಬಿಡ್ತಿಲ್ಲವೇ ಅಂತ ವ್ಯಂಗ್ಯವಾಡಿದ್ದಾರೆ ಆರ್.ಅಶೋಕ್.
ಬಿಟ್ ಕಾಯಿನ್ ಸಂಬಂಧಿಸಿದಂತೆ ಇವತ್ತು ವಿಧಾನ ಸೌಧದಲ್ಲಿ ಸಚಿವರು ಸಭೆ ಮಾಡಿದ್ದಾರೆ.ಈ ಸಭೆಯಲ್ಲಿ ಸಚಿವ ಆರ್ ಅಶೋಕ್, ವಿ ಸೋಮಣ್ಣ, ಗೋಪಾಲಯ್ಯ,ಶಾಸಕ ಪ್ರೀತಂ ಗೌಡ ಭಾಗಿ ಆಗಿದ್ದರು. ಇದೇ ವೇಳೆನೆ ಆರ್.ಅಶೋಕ್ ಸಿದ್ಧರಾಮಯ್ಯನವರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಸಿದ್ದಾರಾಮಯ್ಯನರು ಬಿಟ್ ಕಾಯಿನ್ ಪ್ರಕರಣದಲ್ಲಿ ಇಬ್ಬರ ಹೆಸರಿದೆ ಅಂತಲೇ ಹೇಳುತ್ತಿದ್ದಾರೆ. ಆದರೆ ಅವರಾರು ಅಂತಲೇ ಹೇಳ್ತಿಲ್ಲವೇ ಎಂದು ಚುಚ್ಚಿಸಿದ್ದಾರೆ. ರಫೇಲ್ ಹಗರಣದಲ್ಲೂ ನಾವೂ ಇದ್ದೇ ಅಂತಲೇ ಆರೋಪ ಮಾಡಿದ್ದಾರೆ. ಆದರೆ, ರಫೇಲ್ ಹಗರಣದಲ್ಲಿ ಕಾಂಗ್ರೆಸ್ ಭಾಗಿ ಆಗಿದೆ ಅನ್ನೋದು ಈಗಾಗಲೇ ಸಾಬೀತಾಗಿದೆ ಅಂತಲೇ ಆರ್.ಅಶೋಕ್.ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುತ್ತಲೇ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ತಿದೆ ಅಂತಲೇ ಆರ್.ಅಶೋಕ್ ಟೀಕಿಸಿದ್ದಾರೆ.
Kshetra Samachara
15/11/2021 04:03 pm