ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸದ್ಯ ಹಸಿ ಬಿಸಿ ಚರ್ಚೆಯಲ್ಲಿರುವ ಸುದ್ದಿ ಬಿಟ್ ಕಾಯಿನ್. ಇದನ್ನೇ ಮುಂದಿಟ್ಟು ಕೊಂಡು ಕಾಂಗ್ರೆಸ್ ಬಿಜೆಪಿ ಸರ್ಕಾರ ನಡುವೆ ಆರೋಪಗಳು ಹೇಳಿ ಬರುತ್ತಿವೆ.
ಸದ್ಯ ಇದೇ ವಿಚಾರಕ್ಕೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ರಾಜಕಾರಣಿ ಇದ್ರು ಬಿಡಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಇದ್ದಾರೆ ಎನ್ನಲಾಗುತ್ತಿದೆ. ಯಾರೇ ಇದ್ದರೂ ಅವರನ್ನು ನಾವು ಬಯಲಿಗೆ ಎಳೆದೆ ಎಳೆಯುತ್ತೇವೆ ಎಂದಿದ್ದಾರೆ.
ಇನ್ನು 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆಗೆ ಶ್ರೀಕಿ ಭಾಗಿಯಾಗಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಏಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಹಿಟ್ ಅಂಡ್ ರನ್ ಮಾಡುವುದು ಬೇಡ, ಕಾಂಗ್ರೆಸ್ ನಾಯಕರ ಬುಟ್ಟಿಯಲ್ಲಿ ಹಾವು ಇದ್ರೆ ಬಿಡಲಿ ಅದು ಯಾರನ್ನಾ ಕಚ್ಚತೊ ನೋಡೊನಾ. ಕಾಂಗ್ರೆಸ್ ನವರ ಹತ್ತಿರ ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದಿದ್ದಾರೆ.
ಪ್ರಸ್ತುತದ ಪ್ರಕರಣದಲ್ಲಿ ಬಿಜೆಪಿ ನಾಯಕರ ಯಾವುದೇ ಕೈವಾಡವಿಲ್ಲ.ಬೊಮ್ಮಾಯಿ ಸರ್ಕಾರದ ಬಗ್ಗೆ ದುರುದ್ದೇಶ ಪೂರಿತವಾದ ಆರೋಪ ಮಾಡುವುದು ಬೇಡ ಎಂದಿದ್ದಾರೆ.
Kshetra Samachara
11/11/2021 06:37 pm