ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಹೋಮ ಹವನ; "ಸ್ಮೃತಿ ಇರಾನಿ ಸದ್ಭುದ್ದಿಗೆ ಪ್ರಾರ್ಥನೆ!"

ಸೋನಿಯಾ ಗಾಂಧಿ ಬಗ್ಗೆ ಸ್ಮೃತಿ ಇರಾನಿ ನಡೆ ಖಂಡಿಸಿ ಯುವ ಕಾಂಗ್ರೆಸ್​ನಿಂದ ಕಾಂಗ್ರೆಸ್ ಕಚೇರಿಯಲ್ಲಿ ಹೋಮ-ಪೂಜೆ ನಡೆಸಲಾಗ್ತಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ ನೇತೃತ್ವದಲ್ಲಿ ಹೋಮ ಹವನ ನಡೆಯುತ್ತಿದ್ದು,ಕೇಂದ್ರ ಸಚಿವೆಗೆ ಒಳ್ಳೆಯ ಬುದ್ಧಿ ಬರಲಿ ಅಂತಾ ನಲಪಾಡ್​ ಪ್ರಾರ್ಥನೆ ಮಾಡ್ತಿದ್ದಾರೆ. ಇನ್ನು, ಇದೇ ವೇಳೆ ಮಾತನಾಡಿದ ನಲಪಾಡ್, ಸೋನಿಯಾ ಗಾಂಧಿ ಕುರಿತು ಸಚಿವೆ ಸ್ಮೃತಿ ಇರಾನಿ ನಡವಳಿಕೆ ಖಂಡನೀಯ.

ಸೋನಿಯಾ ಗಾಂಧಿಗೆ 70 ವರ್ಷ ವಯಸ್ಸಾಗಿದ್ದು, ಸಚಿವೆ ಸ್ಮೃತಿ ಇರಾನಿ ನಡವಳಿಕೆ ಖಂಡಿಸ್ತೇವೆ. ಕೇಂದ್ರ ಸಚಿವೆಗೆ ಒಳ್ಳೆಯದಾಗಲಿ, ಸದ್ಭುದ್ದಿ ಬರಲಿ. ಜೊತೆಗೆ ಬದಲಾವಣೆ ಆಗಲಿ ಎಂದು ಗಣಹೋಮ ಮಾಡಲಾಗ್ತಿದೆ ಎಂದು ಹೇಳಿದರು.

ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಖಂಡನಿಯವಾಗಿದೆ. ಬಸ್ ಗೆ ಕಲ್ಲು ಹೊಡೆದರೆ, ನಮ್ಮ ರಾಜ್ಯದ ಜನತೆಗೆ ತೊಂದರೆ ಆಗಲಿದೆ. ಅದನ್ನು ಈ ಸಂಸದ ಅರ್ಥ ಮಾಡಿಕೊಳ್ಳಬೇಕು. ಮಂಗಳೂರಿನಲ್ಲಿ ಹತ್ಯೆ ಆಗಿದೆ. ಹತ್ಯೆ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದರು.

Edited By :
PublicNext

PublicNext

29/07/2022 12:39 pm

Cinque Terre

35.05 K

Cinque Terre

4

ಸಂಬಂಧಿತ ಸುದ್ದಿ