ಹೊಸಕೋಟೆ: ನಂದಿ ಪರ್ವತ ಶ್ರೇಣಿಯ ಚನ್ನಗಿರಿಬೆಟ್ಟದ ಪೂರ್ವಕ್ಕೆ ಹುಟ್ಟುವ ದಕ್ಷಿಣ ಪಿನಾಕಿನಿ ನದಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ವಿಜಯಪುರ ಬೂದಿಗೆರೆ ಕೆರೆ ಮಾರ್ಗವಾಗಿ ಹೊಸಕೋಟೆ ಕೆರೆ ಸೇರಿದ್ದಾಳೆ. ಇದೀಗ ಹೊಸಕೋಟೆ ಕೆರೆ ಕೋಡಿ ಬಿದ್ದಿದ್ದು, ಶಾಸಕ ಶರತ್ ಬಚ್ಚೇಗೌಡ ದಂಪತಿ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಕುಟುಂಬ ಸಮೇತ ಗಂಗಾಮಾತೆಗೆ ಭಾಗಿನ ಅರ್ಪಿಸಿದರು. ಇದೇ ವೇಳೆ ಎಂಟಿಬಿ ನಾಗರಾಜ್ ಗಂಗಾಮಾತೆಗೆ ನಮಿಸಿ ತೆಪ್ಪೋತ್ಸವ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಕೆರೆ ಕಟ್ಟೆ ಮೇಲೆ ಇರುವ ಮೂಲ ಗಂಗಮ್ಮ ದೇವಿಗೆ ಪೂಜೆ ಸಲ್ಲಿಸಲಾಯ್ತು. ನಂತರ ಕೆರೆ ಕೋಡಿಯ ಬಳಿ ಶಾಸ್ತ್ರೋಕ್ತವಾಗಿ ಭಾಗಿನ ಅರ್ಪಿಸಿದ ಸಚಿವರು ನೆರೆದಿದ್ದ ಹತ್ತಾರು ಜನಕ್ಕೆ ಸಿಹಿ ವಿತರಿಸಿದರು. ಇದೇ ವೇಳೆ ಅಕ್ಕಪಕ್ಕದ ಗ್ರಾಮಸ್ಥರು ಮಾತನಾಡಿ ಬೃಹತ್ ಕೆರೆ ಕೋಡಿ ಬಿದ್ದಿರುವುದು ನಮಗೆಲ್ಲಾ ಖುಷಿ ತಂದಿದೆ ಎಂದರು.
ಮಳೆ, ಕೆರೆ, ನೀರಿಂದ ಭೂಮಿ ತಂಪಾಗಿದೆ. 2400 ಎಕರೆ ವಿಸ್ತೀರ್ಣದ ಸುಮಾರು 10,000 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಿತ್ತು ಎಂದು ಕೇಳುವುದೇ ಸಂತೋಷದ ವಿಷಯ.
PublicNext
02/09/2022 08:38 am