ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ನೀರಿನಿಂದ ಅವಾಂತರವಾದ ಪ್ರದೇಶಕ್ಕೆ ಸಿಎಂ ಭೇಟಿ.!

ಬೆಂಗಳೂರು: ತಡ ರಾತ್ರಿ ಸುರಿದ ಭಾರಿ ಮಳೆಗೆ ಮೋರಿ ತುಂಬಿ ಕೊಳಚೆ ಹರಿದು ಮನೆಗಳಿಗೆ ನುಗ್ಗಿದ ಪರಿಣಾಮ, ಸಾರ್ವಜನಿಕರು ಸಂಕಟಕ್ಕೆ ಸಿಲುಕಿದ್ದಾರೆ. ಇಂತಹ ತಗ್ಗು ಪ್ರದೇಶಗಳಿಗೆ ಇಂದು‌ ಸಿಎಂ ಭೇಟಿ ನೀಡಿದ್ದಾರೆ. ಇಂದು ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಐಡಿಯಲ್ ಬಡಾವಣೆಯಲ್ಲಿ ಮಳೆಯಿಂದ ತೊಂದರೆಗೆ ಒಳಗಾದ ಜನವಸತಿ ಪ್ರದೇಶಗಳ ಸ್ಥಳ ಪರಿಶೀಲನೆಯನ್ನು ಸಿಎಂ ಬೊಮ್ಮಾಯಿ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಮುನಿರತ್ನ, ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Shivu K
PublicNext

PublicNext

18/05/2022 06:32 pm

Cinque Terre

40.53 K

Cinque Terre

0

ಸಂಬಂಧಿತ ಸುದ್ದಿ