ದೊಡ್ಡಬಳ್ಳಾಪುರ : ಕ್ರಷರ್ ಲಾರಿ ಚಾಲಕನ Rush ಡ್ರೈವಿಂಗ್ ನಿಂದ ಆಕ್ರೋಶಗೊಂಡ ಶಾಸಕ ಟಿ.ವೆಂಕಟರಮಣಯ್ಯ ಲಾರಿ ಕೀ ಕಿತ್ಕೊಂಡು ರಸ್ತೆ ಸರಿಪಡಿಸುವಂತೆ ವಾರ್ನಿಂಗ್ ಮಾಡಿದ್ದಾರೆ.
ಶಾಸಕ ಟಿ.ವೆಂಕಟರಮಣಯ್ಯ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನಕೇನಹಳ್ಳಿ ಮಾರ್ಗದಲ್ಲಿ ಹೋಗುತ್ತಿರುವಾಗ, ಕ್ರಷರ್ ಲಾರಿ ಚಾಲಕನ Rush ಡ್ರೈವ್ ಕಂಡು ಆತಂಕಗೊಂಡಿದ್ದಾರೆ, ಕ್ರಷರ್ ಲಾರಿಯನ್ನ ತಡೆದು ನಿಲ್ಲಿಸಿದ ಶಾಸಕರು ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಳೇಕೋಟೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ಕ್ರಷರ್ ಗಳಿದ್ದು, ಕ್ರಷರ್ ನಿಂದ ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರುವ ಲಾರಿ ಚಾಲಕರು Rush ಡ್ರೈವಿಂಗ್ ಮಾಡುತ್ತಾರೆ, ಲಾರಿಗಳ ಅತೀವೇಗ ಮತ್ತು ತೂಕ ಮಿತಿ ಮೀರಿ ಲೋಡ್ ಮಾಡುವುದರಿಂದ ರಸ್ತೆಗಳು ಹಾಳಾಗಿವೆ, ಹಳ್ಳ ಬಿದ್ದ ರಸ್ತೆಗಳಿಂದ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಕ್ರಷರ್ ಲಾರಿ ಚಾಲಕನ ಅತಿವೇಗದಿಂದ ಅಕ್ರೋಶಗೊಂಡ ಶಾಸಕರು ಲಾರಿ ಕೀ ಕಿತ್ಕೊಂಡ್ ರಸ್ತೆ ರಿಪೇರಿ ಮಾಡುವಂತೆ ವಾರ್ನಿಂಗ್ ಮಾಡಿದ್ದಾರೆ.
ಮೊನ್ನೆ ಮೂಗೇನಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಸ್ಥಳೀಯ ಯುವಕ ಸಾವನ್ನಪ್ಪಿದ, ಇಲ್ಲಿಯೂ ಸಹ ಲಾರಿ ಚಾಲಕನ ಅತೀವೇಗ ಮತ್ತು ಹಳ್ಳಬಿದ್ದ ರಸ್ತೆಯೇ ಅಪಘಾತಕ್ಕೆ ಕಾರಣವಾಗಿತ್ತು.
PublicNext
07/09/2022 07:08 pm