ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈಶಾನ್ಯ ವಿಭಾಗ ಪೊಲೀಸರಿಗೆ ಕಹಿ ಕಡುಬು!; ಮನೆ ಬಾಡಿಗೆ, ಸಂಚಾರ ಭತ್ಯೆಗೆ ಕೊಕ್ಕೆ

ಬೆಂಗಳೂರು: ಹೆಸರಿಗೆ ಮಾತ್ರ ಬೆಂಗಳೂರು ಪೊಲೀಸರು. ಹೆಸರಿಗೆ ಮಾತ್ರ ಸಿಟಿ ಕಮಿಷನರೇಟ್ ವಿಭಾಗ. ಹೆಸರಿಗೆ ಮಾತ್ರ ಬೆಂಗಳೂರು ಇಂಟರ್ ನೇಶನಲ್ ಏರ್‌ ಪೋರ್ಟ್ ಪೊಲೀಸರು. ಆದರೆ, ಇವರಿಗೆ ಕೊಡ್ತಾ ಇದ್ದ ಗೃಹ ಬಾಡಿಗೆ ಮತ್ತು ಸಂಚಾರ ಭತ್ಯೆಗೆ ಸರ್ಕಾರ ಬ್ರೇಕ್ ಹಾಕಿದೆ!

ಹೌದು... ಈಶಾನ್ಯ ವಿಭಾಗದ ದೇವನಹಳ್ಳಿ, ಚಿಕ್ಕಜಾಲ & ಬಾಗಲೂರು ಪೊಲೀಸ್ ಸ್ಟೇಷನ್‌ ಗಳ ಜೊತೆಗೆ ದೇವನಹಳ್ಳಿ ಇಂಟರ್‌ ನೇಶನಲ್ ಏರ್‌ ಪೋರ್ಟ್ ಟ್ರಾಫಿಕ್ ಪೊಲೀಸ್ ಸ್ಟೇಷನ್‌ ಗಳ 310ಕ್ಕೂ ಹೆಚ್ಚು ಪೊಲೀಸರಿಗೆ ನೀಡ್ತಿದ್ದ 24% ಮನೆ ಬಾಡಿಗೆ & ಪ್ರಯಾಣ ಭತ್ಯೆಗೆ ಸರ್ಕಾರ ಕೊಕ್ಕೆ ಹಾಕಿದೆ. ಬದಲಿಗೆ 8% ನಂತೆ ಗ್ರಾಮೀಣ ಭಾಗದ ಭತ್ಯೆ ನೀಡುವಂತೆ ಆದೇಶ ಹೊರಡಿಸಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

2008ರಲ್ಲಿ ದೇವನಹಳ್ಳಿ ಇಂಟರ್‌ ನೇಶನಲ್‌ ಏರ್‌ ಪೋರ್ಟ್ ಪ್ರಾರಂಭವಾದ ನಂತರ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಇಂಟರ್‌ ನೇಶನಲ್‌ ಏರ್‌ ಪೋರ್ಟ್ & ಇಂಟರ್‌ ನೇಶನಲ್‌ ಏರ್‌ ಪೋರ್ಟ್ ಟ್ರಾಫಿಕ್ ಪೊಲೀಸ್ ಸ್ಟೇಷನ್‌ ಗಳನ್ನು ಈಶಾನ್ಯ ವಿಭಾಗಕ್ಕೆ ಸೇರಿ‌ಸಿ ಕಮಿಷನರೇಟ್ ವ್ಯಾಪ್ತಿಗೆ ತರಲಾಗಿತ್ತು.

ಅಂದಿನಿಂದ ಈ ವಿಭಾಗಗಳ ಪೊಲೀಸ್ರಿಗೆ ಕಮಿಷನರೇಟ್ ಗೃಹಬಾಡಿಗೆ & ಪ್ರಯಾಣ ಭತ್ಯೆ ಸಿಗ್ತಿತ್ತು. ಇದೀಗ ಸರ್ಕಾರ ಆರ್ಥಿಕ ಹೊರೆ ಸರಿದೂಗಿಸಿಕೊಳ್ಳಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳ ಪೊಲೀಸರಿಗೆ ಗ್ರಾಮಾಂತರದಲ್ಲಿ ನೀಡಲಾಗ್ತಿರುವ ಭತ್ಯೆ ನೀಡಲು ಮುಂದಾಗಿದೆ. ಇದು ಅವೈಜ್ಞಾನಿಕ ಕ್ರಮ ಅಂತಾರೆ ಸ್ಥಳೀಯ ಜನರು.

ಹೆಸರಿಗೆ ಮಾತ್ರ ದೇವನಹಳ್ಳಿ ಇಂಟರ್‌ ನೇಶನಲ್‌ ಏರ್‌ ಪೋರ್ಟ್ & ಅಕ್ಕಪಕ್ಕದ ಪೊಲೀಸ್ ಸ್ಟೇಷನ್ಸ್. ನಗರಕ್ಕಿಂತ ವೇಗವಾಗಿ ಬೆಳೆಯುತ್ತಿರುವ ಈ ಪ್ರದೇಶಗಳಲ್ಲಿ ಬೆಂಗಳೂರಿಗಿಂತ ಅಧಿಕ ಬಾಡಿಗೆ, ಸ್ಕೂಲ್ ಫೀಸ್, ತರಕಾರಿ & ಗೃಹಬಳಕೆ ವಸ್ತುಗಳಿಗೆ ಅಧಿಕ ಬೆಲೆಯಿದೆ. ಏರ್‌ ಪೋರ್ಟ್ ಸುತ್ತಮುತ್ತ ನಗರ ಪ್ರದೇಶಗಳಿಗಿಂತ ಹೆಚ್ಚಿನ ಪೊಲೀಸ್ ಕೆಲಸ ಇರುತ್ತೆ. ಅಂತದ್ರಲ್ಲಿ ಹೆಚ್ಚಿಗೆ ಭತ್ಯೆ ನೀಡುವ ಬದಲಿಗೆ 4 ಪೊಲೀಸ್ ಠಾಣೆಗಳ 310 ಕ್ಕೂ ಹೆಚ್ಚು ಪೊಲೀಸರ ಗೃಹಭತ್ಯೆ ಕಡಿಮೆ ಮಾಡಿರುವುದು ಸರ್ಕಾರದ ನಾಚಿಕೆಗೇಡಿನ‌ ನಡೆಯಾಗಿದೆ.

Edited By : Somashekar
PublicNext

PublicNext

01/09/2022 11:46 am

Cinque Terre

23.25 K

Cinque Terre

2

ಸಂಬಂಧಿತ ಸುದ್ದಿ