ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಕಸ ತಂದ ಗೋಳು" ದಿನನಿತ್ಯ ಶ್ವಾಸಕೋಶ ಕಾಯಿಲೆಗೆ ಜನ ತುತ್ತು!; ಹೈಕೋರ್ಟ್‌ ಗೆ ಅಲವತ್ತು

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ಜೆ.ಎಸ್.ಎಸ್. ಕಾಲೇಜ್ ಆವರಣದಲ್ಲಿ ಇಂದು ಸಾರ್ವಜನಿಕ ಸಭೆ ನಡೆಯಿತು. ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿ ಜನರು ಅವರ ಏರಿಯಾದಲ್ಲಿರುವ ಎಲ್ಲಾ ಸಮಸ್ಯೆ ಬಗ್ಗೆ ಸಚಿವರು, ಅಧಿಕಾರಿಗಳ ಹತ್ತಿರ ಚರ್ಚಿಸಿದ್ರು. ಅಧಿಕಾರಿಗಳು ತಕ್ಕ ಉತ್ತರ ಕೊಟ್ಟು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ರು.

ಆದ್ರೆ, ಬನಶಂಕರಿ 6ನೇ ಹಂತದ 4ನೇ ಕ್ರಾಸ್ ನಲ್ಲಿ ಬಿಡಿಎ ಅಪಾರ್ಟ್ಮೆಂಟ್ ಬರುತ್ತದೆ. ಇಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಕಸದ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಜನ 20 ವರ್ಷದಿಂದ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಲಂಗ್ಸ್ ಇನ್‌ ಫೆಕ್ಷನ್ ಆಗಿ ದಿನಕ್ಕೆ ಒಬ್ಬರು ಆಸ್ಪತ್ರೆ ಸೇರುತ್ತಿದ್ದಾರೆ!

ಇಲ್ಲಿನ ಡಂಪಿಂಗ್ ಯಾರ್ಡ್ ನಿಂದಾಗಿ ನಾವು ಅನುಭವಿಸದೇ ಇರೋ ಕಷ್ಟ ಅಷ್ಟಿಷ್ಟಲ್ಲ. ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿದ್ರೆ, ಇದು ನಮ್ಮ ಸುಪರ್ದಿಗೆ ಬರಲ್ಲ. ಬಿಡಿಎ ಅವರಿಗೆ ಹೇಳಿ ಅಂತಾರೆ. ಈ ಬಗ್ಗೆ ಬೇಸತ್ತ ಜನ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಬಿಬಿಎಂಪಿಯವರು ವಾರ್ಡ್ ವಿಸಿಟ್ ಮಾಡದೆ‌ ಕೋರ್ಟ್ ಗೆ ದುರ್ವಾಸನೆ ಇಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದ ಸಾರ್ವಜನಿಕರು ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಜನರು ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

ಇದೆಲ್ಲವನ್ನೂ ಗಮನಿಸಿದ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಯಶವಂತಪುರ ಕ್ಷೇತ್ರದ ಎಲ್ಲಾ ಬಿಡಿಎಗಳನ್ನ ಬಿಬಿಎಂಪಿ ಹ್ಯಾಂಡೋವರ್ ಮಾಡಬೇಕು. ನಂತರ ಸಮಸ್ಯೆಗಳನ್ನು ಪೂರ್ಣ ಪರಿಶೀಲನೆ ಮಾಡಿ ಕ್ಲೀನ್ ಮಾಡಿಸುತ್ತೇವೆ. ಬನಶಂಕರಿಗೆ 105 ಕೋಟಿ ಬಿಡುಗಡೆ ಮಾಡಲಾಗಿದೆ.

BWSSB ಕಾಮಗಾರಿ ಮುಗಿದ ನಂತರ ಕಸದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸುತ್ತೇನೆ. ನಾನೂ ಈಗಾಗ್ಲೇ ಇದರ ಬಗ್ಗೆ ಸಿಎಂ ಹತ್ತಿರ ಮಾತನಾಡಿದ್ದೇನೆ. 3 ದಿನ ಟೈಂ ಕೊಡಿ, ಎಲ್ಲವನ್ನೂ ಸರಿಪಡಿಸುತ್ತೇನೆ ಎಂದರು.

-ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್ ಬೆಂಗಳೂರು

Edited By : Shivu K
Kshetra Samachara

Kshetra Samachara

27/07/2022 08:13 am

Cinque Terre

4.49 K

Cinque Terre

1

ಸಂಬಂಧಿತ ಸುದ್ದಿ