ಬೆಂಗಳೂರು: ವಿಧಾನಸೌಧದ ಮುಂದೆ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರ ಜನ್ಮದಿನದ ಪ್ರಯುಕ್ತ ಹಾಕಲಾಗಿದ್ದ ಬ್ಯಾನರ್ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಗುರುತಿಸಿಕೊಂಡಿರುವ ಬಿಂದು ಗೌಡ, ಸಿ.ಟಿ. ರವಿ ಅವರ ಪೋಸ್ಟರ್ ಕಿತ್ತೆಸೆದು ಸಿಟ್ಟು ಪ್ರದರ್ಶಿಸಿದ್ದಾರೆ. ಪೂರ್ವ ನಿಯೋಜಿತ ಕೃತ್ಯದಂತೆ ಭಾಸವಾಗುತ್ತಿರುವ ಈ ವೀಡಿಯೊದಲ್ಲಿ ಬಿಂದು ಗೌಡ ಅವರ ಕೃತ್ಯವನ್ನು ಮತ್ತೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಿಂದು ಗೌಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ಯಾನರ್ ಬ್ಯಾನ್ ಆಗಿದ್ರೂ ವಿಧಾನ ಸೌಧದ ಮುಂದೆ ಕಟ್ಟೋದಿಕ್ಕೆ ಧಮ್ ಬೇಕಲೇ. ಸಿ.ಟಿ. ರವಿ ಶೇಮ್ ಆನ್ ಯೂ ಎಂದು ಪೋಸ್ಟ್ ಮಾಡಿದ್ದಾರೆ.
PublicNext
18/07/2022 07:36 pm