ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಬೆಲೆ ರಸ್ತೆಗಳ ಗುದ್ದಲಿಪೂಜೆ ನೆರವೇರಿಸಿದ ಸಚಿವ ಎಸ್.ಟಿ‌ ಸೋಮಶೇಖರ್

ಬೆಂಗಳೂರು: ಹೆಚ್ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡಬೆಲೆ ಕಾಲೋನಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಗುದ್ದಲಿ ಪೂಜೆಯನ್ನ ಸಚಿವ ಎಸ್.ಟಿ.ಸೋಮಶೇಖರ್ ನೆರವೇರಿಸಿದ್ರು. ಹಲವು ವರ್ಷದಿಂದ ಹಾಳಾಗಿದ್ಧ ಕಾಲೋನಿಯ ರಸ್ತೆಗೆ ಕೊನೆಗೂ ಕಾಂಕ್ರೀಟ್ ಭಾಗ್ಯ ಸಿಕ್ತಿದೆ.

ಕಾಲೋನಿಯ ಜನಕ್ಕೆ ಈ ರಸ್ತೆಯಿಂದ ಬಹಳ ಸಮಸ್ಯೆಯಾಗ್ತಿತ್ತು. ಶಾಲೆಗೆ ಹೋಗುವ ಮಕ್ಕಳಿಗೆ, ವಾಹನ ಸವಾರರಿಗೆ ಇಲ್ಲಿ ಓಡಾಡಲು ತೊಂದರೆಯಾಗ್ತಿತ್ತು. ಮಳೆಗಾಲದಲ್ಲಿ ಬಿಎಂಟಿಸಿ ಬಸ್ ಗಳು ಈ ಊರಿಗೇ ಬರುತ್ತಿರಲಿಲ್ಲವಂತೆ. ಈ‌ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಒಂದೂವರೆ ಕೋಟಿ ಹಣವನ್ನು ಮಂಜೂರು ಮಾಡಿ ದೊಡ್ಡಬೆಲೆ ಕಾಲೋನಿಯಿಂದ ವೆಂಕಟಪುರ ಅಪಾರ್ಟ್ಮೆಂಟ್ ವರೆಗೂ ಕಾಂಕ್ರೀಟ್ ರಸ್ತೆ ಮಾಡ್ತಿದ್ದಾರೆ. ಇನ್ನು ಪೂಜೆ ನಂತರ ಮಾತಮಾಡಿದ ಎಸ್.ಟಿ ಸೋಮಶೇಖರ್ ಎರಡು ರಸ್ತೆಗಳನ್ನ ರೆಡಿ ಮಾಡ್ತಿದ್ದೇವೆ. ಒಂದು ರಸ್ತೆ 70 ಲಕ್ಷದಂತೆ ಎರಡು ರಸ್ತೆಗಳಿಗೆ 1 ಕೋಟಿ 40 ಲಕ್ಷದ ವೆಚ್ಚದಲ್ಲಿ ಕಾಮಗಾರಿ ಮಾಡಲಾಗ್ತಿದೆ ಎಂದು ತಿಳಿಸಿದ್ರು.

ರಂಜಿತಾ ಸುನಿಲ್ ‌ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Somashekar
Kshetra Samachara

Kshetra Samachara

16/06/2022 07:41 pm

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ