ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಬಿಲ್‌ಗಾಗಿ ಮತ್ತೆ ತುಳಸಿಕಟ್ಟೆ ಸುತ್ತಬೇಕು ಏಕೆ... ?

ಬೆಂಗಳೂರು- ಗುತ್ತಿಗೆದಾರರ ಆರೋಪದ 40% ಕಮಿಷನ್ ಭೂತ ಇದೀಗ ಬಿಬಿಎಂಪಿ ಹೆಗಲೇರಿದೆ. ಆರ್‌ಡಿಪಿಆರ್ ಹಾಗೂ ಪೊಲೀಸ್ ಇಲಾಖೆ ಕಾಡುತ್ತಿರುವ 40% ಕಮಿಷನ್ ರಾಜಧಾನಿಯ ಶಕ್ತಿ ಕೇಂದ್ರ ಬಿಬಿಎಂಪಿಗೆ ವಕ್ಕರಿಸಿಕೊಂಡಿದೆ. ಇಲ್ಲಿ ಹಣ ಪಾವತಿಯಾಗುವ ತುಳಸಿಕಟ್ಟೆ ಮಾದರಿ ವಿಶೇಷ ಕಚೇರಿಗಳನ್ನು ಸಮಾಧಾನಪಡಿಸದೇ ಗುತ್ತಿಗೆದಾರರ ‌ಹಣ ಸೇರುವ ಪ್ರಶ್ನೆಯೇ ಇಲ್ಲ.

ಸುಮಾರು ವರ್ಷದ ಹಿಂದೆ ಪೂರ್ಣವಾಗಿರುವ 1,100 ಕೋಟಿ ಕಾಮಗಾರಿಗಳ ಬಿಲ್ ಪಾವತಿಗೆ ಕಳೆದ ತಿಂಗಳು 1000 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಆದರೆ ವಿಶೇಷ ಹಣ ಪಾವತಿ ಕಟ್ಟೆಗಳನ್ನ ಸುತ್ತಿ ಕೈ ಬೆಚ್ಚಗೆ ಮಾಡದೇ ಹಣ ಬಿಡುಗಡೆ ಆಗುತ್ತಿಲ್ಲ ಎಂದು ಗುತ್ತಿಗೆದಾರರ ಆರೋಪಿಸುತ್ತಿದ್ದಾರೆ.

ಇನ್ನು ಪಾಲಿಕೆಯಲ್ಲಿ ಸಾವಿರ ಕೋಟಿ ಹಣವಿದ್ದರೂ ಬಿಲ್ ಪಾವತಿ ಮಾಡದೇ ಇರೋದಕ್ಕೆ ಕಾರಣ ಗುತ್ತಿಗೆದಾರರಿಂದ ಹೆಚ್ಚು ಪರ್ಸ್ಂಟೇಜ್ ಪೀಕಲು. ಈಗಾಗಲೇ ಶೇ 45%ರಷ್ಟು ಹಣ ಕಾಮಗಾರಿ ಲಂಚ ನೀಡಬೇಕಾಗಿದೆ ಎಂದು ಗುತ್ತಿಗೆದಾರರು ದೂರುತ್ತಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಆರೋಪ ನಿರಾಕರಿಸುತ್ತಾರೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಾರೆ.

ಒಟ್ನಲ್ಲಿ ಪಾಲಿಕೆಯಲ್ಲಿ ಕಮಿಷನ್ ಭೂತ ತಾಂಡವ ಆಡ್ತಿದೆ. ಅದ್ರಲ್ಲೂ ತುಳಸಿಕಟ್ಟೆ ಸುತ್ತೋದು ಮಾತ್ರ ತೀವ್ರ ಚರ್ಚೆಗೆ ಕಾರಣ ಆಗ್ತಾಯಿದೆ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು

Edited By :
PublicNext

PublicNext

21/04/2022 09:21 pm

Cinque Terre

52.04 K

Cinque Terre

1

ಸಂಬಂಧಿತ ಸುದ್ದಿ