ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಡವರ ದಶಕದ ಪರದಾಟಕ್ಕೆ ತೆರೆ; 1035 ಜನರಿಗೆ ಹಕ್ಕುಪತ್ರ ವಿತರಣೆ

ಯಲಹಂಕ: ಸರ್ಕಾರದ ಜಮೀನಿನಲ್ಲಿ ವಾಸ ಮಾಡ್ತಾ, ಹಕ್ಕುಪತ್ರಕ್ಕಾಗಿ ದಶಕದಿಂದ ಅಲೆದಾಡ್ತಿದ್ದ 1035 ಜನರಿಗೆ ಅಂತೂ ಇಂದು ಹಕ್ಕುಪತ್ರ ಸಿಕ್ಕಿದೆ.

ಯಲಹಂಕ ತಾಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಾಲ ಹೋಬಳಿಯ ಹತ್ತಾರು ಹಳ್ಳಿಗಳ ಸಾವಿರಾರು ಬಡಜನರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು. ಸರ್ಕಾರಿ ಜಾಗ ಗುರ್ತಿಸಿ ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸಿದ್ದರು. ಇಂದಲ್ಲ ನಾಳೆ ನಮಗೆ ವಾಸ ಜಾಗದ ಪ್ರಮಾಣಪತ್ರ ಸಿಗುತ್ತದೆ ಎಂಬ ನಿರೀಕ್ಷೆಲಿ ಸಾವಿರಾರು ಜನ ಪರಿತಪಿಸುತ್ತಿದ್ದರು. ಇದೀಗ ಮುಕ್ತಿ ಸಿಕ್ಕಿದೆ.

ಸೂಕ್ತ ದಾಖಲೆ ಇಲ್ಲದೆ ಮನೆ ಕಟ್ಟಿಕೊಂಡು ಸಂಪೂರ್ಣ ಇರಲೂ ಆಗದೆ, ಬೇರೆ ಕಡೆ ಹೋಗಲಾರದೆ ಪರದಾಡ್ತಿದ್ದರು. ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಸಾವಿರಾರು ಜನರ ಮನೆ-ನಿವೇಶನದ ಕನಸು ಕಣ್ಣಾಮುಚ್ಚಾಲೆ ಆಡ್ತಿತ್ತು. ಇದೀಗ ಕಂದಾಯ ಸಚಿವ ಆರ್.ಅಶೋಕ್ & ಬ್ಯಾಟರಾಯನಪುರದ ಬಿಜೆಪಿ ಮುಖಂಡ ಎ.ರವಿ ಪ್ರಯತ್ನ ಫಲ ನೀಡಿದೆ. ಇಂದು ಹಕ್ಕು ಪತ್ರ ಪಡೆದ ಜನ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಡಳಿತ ಸೂಕ್ತ ದಾಖಲೆ ಪರಿಶೀಲನೆ ಸರ್ಕಾರಿ ಜಾಗವನ್ನು ನಿವೇಶನಗಳನ್ನಾಗಿ ಗುರ್ತಿಸಿದೆ. ಒಟ್ಟು1035 ಜನರಿಗೆ ಹಕ್ಕುಪತ್ರ ವಿತರಿಸಿದ್ರು. ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೆ ಮೂರ್ನಾಲ್ಕು ತಿಂಗಳಲ್ಲಿ ಹತ್ತು ಸಾವಿರಕ್ಕು ಹೆಚ್ಚು ಹಕ್ಕುಪತ್ರ ವಿತರಿಸುವ ಉದ್ದೇಶ ಇದೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.

Edited By : Somashekar
PublicNext

PublicNext

01/08/2022 08:00 pm

Cinque Terre

26.03 K

Cinque Terre

0

ಸಂಬಂಧಿತ ಸುದ್ದಿ