ಬೆಂಗಳೂರು: ಆರೋಗ್ಯ ತಪಾಸಣೆ ಶಿಬಿರಕ್ಕೆ ಸಚಿವ ಅಶ್ವಥ್ ನಾರಾಯಣ್ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸ್ಯಾಂಕಿ ಟ್ಯಾಂಕಿ ಸೇರಿ ನಾಲ್ಕು ಕಡೆ ಅನೂಪ್ ಅಯ್ಯಂಗಾರ್ ನೇತೃತ್ವ ದಲ್ಲಿ ಹೆಲ್ತ್ ಕ್ಯಾಂಪ್ ನಡೆಯುತ್ತಿತ್ತು. ಈ ಸಂಬಂಧ ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳಲಾಗಿತ್ತು.
ಪೊಲೀಸರಿಗೂ ಈ ಬಗ್ಗೆ ಹೆಲ್ತ್ ಕ್ಯಾಂಪ್ ಕುರಿತು ಮಾಹಿತಿಯನ್ನು ಆಯೋಜಕರು ನೀಡಿದ್ದರು. ಆದರೆ ಏಕಾಏಕಿ ಬಂದು ಹೆಲ್ತ್ ಕ್ಯಾಂಪ್ ನಡೆಸದಂತೆ ಸಚಿವ ಡಾ. ಆಶ್ವಥ್ ನಾರಾಯಣ್ ರವರು ಪೊಲೀಸ್‌ರ ಮುಖಾಂತರ ತಡೆದಿದ್ದಾರೆ ಎಂದು ಆಯೋಜಕರು ಆರೋಪಿ ಸುತ್ತಿದ್ದಾರೆ.
ಬಿಪಿ,ಶುಗರ್ ಚೆಕ್ ಮಾಡೋಕೆ ಈ ರೀತಿಯ ಹೆಲ್ತ್ ಕ್ಯಾಂಪ್ ನಡೆಸಲಾಗುತ್ತದೆ. ಅದೇ ಶಾಸಕರ ಬರ್ತ್ ಡೇ, ಪಾರ್ಟಿ ಗಳಿಗೆ ಪೊಲೀಸರಿಂದ ಯಾವುದೇ ಅಡ್ಡಿಯಿಲ್ಲ. ಹೀಗಾಗಿ ಮಲ್ಲೇಶ್ವರಂ ಶಾಸಕರ ರಾಜಕೀಯ ನಡೆ ಅಸಾಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
PublicNext
05/05/2022 05:42 pm