ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ತೀವ್ರತೆ ಹೆಚ್ಚಾಗುತ್ತಿದೆ.. ಈ ಮಧ್ಯೆ ಶಾಕಸ ಜಮೀರ್ ತಮ್ಮ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಪಂದ್ಯಾವಳಿಗಳ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.
ಈ ವೇಳೆ ಅಲ್ಲೇ ಇದ್ದ ನೂರಾರು ಮಂದಿ ಜಮೀರ್ ಬೆಂಬಲಿಗರು ಶಾಸಕರ ಕ್ರಿಕೆಟ್ ಆಟ ನೋಡಿ ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಬಾಲ್ ಕ್ಯಾಚ್ ಹಿಡಿದ ಹುಡುಗನಿಗೆ 500 ರೂಪಾಯಿಯ ಗರಿಗರಿ ನೋಟುಗಳನ್ನು ಶಾಸಕ ಜಮೀರ್ ನೀಡಿದ್ರು. ಎಲ್ರಿಗೂ ಬುದ್ಧಿ ಹೇಳಬೇಕಿದ್ದ ಶಾಸಕ ಜಮೀರ್ ತಾವೇ ಕೋವಿಡ್ ನಿಯಮಗಳನ್ನು ಮರೆತು ಅಂಧಾ ದರ್ಬಾರ್ ನಡೆಸಿದ್ದು ಪ್ರಜ್ಞಾವಂತರು ಕಿಡಿಕಾರುವಂತೆ ಮಾಡಿದೆ.. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೇ ಬೆಂಬಲಿಗರ ಜತೆ ಜಮೀರ್ ಭಾಯಿ ಕ್ರಿಕೆಟ್ ಆಡೋದ್ರಲ್ಲಿ ಪೂರ್ತಿ ಬ್ಯುಸಿಯಾಗಿದ್ರು..
PublicNext
27/01/2022 04:42 pm