ಬೆಂಗಳೂರು: ರಾಜ್ಯದಲ್ಲಿ ಯಾರಾದರು ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ. ಪೇಮೆಂಟ್ ಮಾಡಿ ಸಿದ್ದು ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಖರ್ಗೆ, ಪರಮೇಶ್ವರ ಸಿನಿಯರ್, ಡಿಕೆಶಿ, ದೇಶಪಾಂಡೆಯಂತ ಲೀಡರ್ ನಡುವೆ ಸಿಎಂ ಆಗಿದ್ದು ಪೇಮೆಂಟ್ ಮಾಡಿಯೇ. ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸೀಟ್ ಉಳಿಸಿಕೊಂಡಿದ್ದು ಎಂದರು.
ಸಿದ್ದರಾಮಯ್ಯ ಅವರು ಪೇ ಮಾಡಿಯೇ ಮೇಡಂರನ್ನ ಸಂತೋಷ ಪಡಿಸಿದ್ದಾರೆ. ಪೇಸಿಎಂ ನಲ್ಲಿ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ. ಪೇಮೆಂಡ್ ಮಾಡಿದ ಸಿಎಂ ಪೇ ಸಿಎಂ ಪೇಮೆಂಟ್ ಪಡೆದ ಮೇಡಂ ಪೇ ಕಾಂಗ್ರೆಸ್ ಮೇಡಂ. ಇದು ಡಿಕೆ ಶಿವಕುಮಾರ್ ಮಾಡಿರುವ ಅದು ಸಿದ್ದರಾಮಯ್ಯ ಅರ್ಥ ಆಗದೇ ಇರುವುದರಿಂದ ಪೋಸ್ಟ್ ಹಚ್ಚಲು ಹೋಗಿದ್ದಾರೆ ಎಂದರು.
PublicNext
27/09/2022 05:31 pm