ಬೆಂಗಳೂರು: ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಮೂಲಕ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿದ್ದು, ಇದೀಗ ಇದರ ಮುಂದುವರಿದ ಭಾಗವಾಗಿ ಮಂತ್ರಿಮಹೋದಯರ ಹಗರಣಗಳ ಶೀರ್ಷಿಕೆಯಡಿಯೂ ಪೋಸ್ಟರ್ ರಿಲೀಸ್ ಮಾಡಿದೆ.
ಸಚಿವ ಆರ್. ಅಶೋಕ್ ಬಗ್ಗೆ 2013ರಲ್ಲಿ ಪತ್ರಿಕೆಯೊಂದರ ವರದಿಯಲ್ಲಿ ಪ್ರಕಟವಾಗಿದ್ದ, ಪದ್ಮನಾಭನಗರದ ಮೂರಕ್ಕೆ ಮೂರು ಕೆರೆ ಸ್ವಾಹ ವರದಿಯನ್ನ, ಪೋಸ್ಟರ್ ಮಾಡಿ ಗೋಡೆಗಳಿಗೆ ಅಂಟಿಸಲಾಗಿದೆ. ಕೆರೆಗಳನ್ನ ನುಂಗಿದ ಸಾಮ್ರಾಟ್ ಅಶೋಕ ಎಂದು ತಲೆ ಬರಹ ನೀಡಿ ಪೋಸ್ಟರ್ ಅಂಟಿಸಲಾಗಿದೆ. ಇನ್ನೂ ಈ ಪೋಸ್ಟರ್ ಗೆ ಬಿಜೆಪಿ ಯಾವ ರೀತಿ ತಿರುಗೇಟು ಕೊಡಲಿದೆ ಎಂದು ಕಾದು ನೋಡಬೇಕು.
PublicNext
25/09/2022 01:24 pm