ಯಲಹಂಕ: ಬೆಂಗಳೂರಿನಿಂದ ದೊಡ್ಡಬಳ್ಳಾಪುರದವರೆಗೂ ಬಿಜೆಪಿ ಜನೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಫ್ಲೆಕ್ಸ್ ಳನ್ನು ಹಾಕಲಾಗಿತ್ತು. ಜುಲೈ 28ಕ್ಕೆ ಅಂದರೆ ಇಂದು ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದೆ. ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಕೊಲೆ ಹಿನ್ನೆಲೆಯಲ್ಲಿ ದುಃಖದ ನಡುವೆ ಜನೋತ್ಸವ ನಡೆಸುವುದು ಸೂಕ್ತವಲ್ಲ ಎಂದು ರದ್ದು ಮಾಡಲಾಗಿದೆ.
ಆದರೆ, ಕಾರ್ಯಕ್ರಮದ ಹೆಸರಲ್ಲಿ ಸರ್ಕಾರ ಜನರ ತೆರಿಗೆಯ ಕೋಟಿ ಕೋಟಿ ಹಣವನ್ನು ದುಂದುವೆಚ್ಚ ಮಾಡಿರೋದು ಎದ್ದು ಕಾಣ್ತಿದೆ. ಒಂದೊಂದು ಫ್ಲೆಕ್ಸ್ ಗೆ 5 ಸಾವಿರ, 10 ಸಾವಿರ, 20 ಸಾವಿರ ಖರ್ಚು ಮಾಡಲಾಗಿದೆ. ತಮಿಳುನಾಡಿನ ಸೇಲಂ ತಂಡ ಫ್ಲೆಕ್ಸ್ ಹಾಕುವ ಕೋಟ್ಯಂತರ ರೂ.ಗಳ ಕಾಂಟ್ರಾಕ್ಟ್ ಪಡೆದಿದೆ. ಸಣ್ಣ ಕಟ್ಟಿಗೆಗೆ 50 ರೂ., ಕೋಲಿಗೆ 100, ದೊಡ್ಡ ಮರಕ್ಕೆ 200 ರೂ. ಹೀಗೆ ಬಾಡಿಗೆ ನೀಡಲಾಗ್ತಿದೆ. ಒಟ್ಟು ಸಾವಿರಾರು ಫ್ಲೆಕ್ಸ್ ಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ!
ಈ ಕೋಟ್ಯಂತರ ದುಡ್ಡಲ್ಲಿ ಒಂದು ಗ್ರಾಮ ಪಂಚಾಯ್ತಿಯನ್ನಾದರೂ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದರೆ ಜನರಿಗೆ ಅನುಕೂಲ ಆಗ್ತಿತ್ತು. ಹೀಗೆ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡೊ ಜನ, ಕ್ಯಾಮೆರಾ ಮುಂದೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ತೆರಿಗೆ ದುಡ್ಡು ಹೀಗೆ ಪೋಲಾಗುವುದು ಎಷ್ಟರ ಮಟ್ಟಿಗೆ ಸರಿ?
PublicNext
28/07/2022 05:29 pm