ವರದಿ- ಗಣೇಶ್ ಹೆಗಡೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ನಡೆಯುವ ಮುನ್ಸೂಚನೆ ಕೇಳಿ ಬರ್ತಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮರುವಿಂಗಡಣೆಗೆ ಕಾರ್ಯ ಕೂಡಾ ಪೂರ್ಣಗೊಂಡಿದೆ. ಈಗಾಗಲೇ ರಚಿಸಿದ್ದ ಸಮಿತಿಯು ವಾರ್ಡ್‌ಗಳ ಪುನರ್ ವಿಂಗಡಣೆ ಕುರಿತು ತನ್ನ ಅಭಿಪ್ರಾಯ ಸೂಚಿಸಿ, ವರದಿ ಸಲ್ಲಿಸಿದೆ.
ಮರು ವಿಂಗಡಣೆ ವೇಳೆ ಬಿಬಿಎಂಪಿ ವ್ಯಾಪ್ತಿಯ ಆಸು-ಪಾಸಿನ ಗ್ರಾಮಗಳು ಸೇರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದೀಗ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಅಕ್ಕಪಕ್ಕದ ಗ್ರಾಮಗಳ ಸೇರ್ಪಡೆಯನ್ನು ಶಿಫಾರಸು ಮಾಡಿಲ್ಲ. ಹಾಲಿ ಅಸ್ತಿತ್ವದಲ್ಲಿದ್ದ 198 ವಾರ್ಡ್‌ಗಳ ವ್ಯಾಪ್ತಿಯನ್ನೇ ಹೊಸದಾಗಿ ವಿಂಗಡಿಸಿ, 243 ವಾರ್ಡ್‌ಗಳಾಗಿ ಪುನರ್ ರೂಪಿಸಲಾಗಿದೆ.
ಭೌಗೋಳಿಕ ವಿಸ್ತೀರ್ಣಕ್ಕಿಂತಲೂ ಜನಸಂಖ್ಯೆಯನ್ನೇ ಆಧರಿಸಿ ವಿಂಗಡ ಣೆ ಮಾಡಲಾಗಿದೆ. ಇದರಲ್ಲಿ ಹೊಸ ಗ್ರಾಮಗಳು ಸೇರ್ಪಡೆಯಾಗಿಲ್ಲ. ಈ ಹಿಂದೆ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವಾಗ ಹೊಸ ಗ್ರಾಮಗಳನ್ನು ಸೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಯಾವುದೇ ಹಳ್ಳಿಯನ್ನು ಸೇರ್ಪಡೆ ಮಾಡದೆ ವರದಿ ಸಲ್ಲಿಸಲಾಗಿದೆ. ಮುಖ್ಯವಾಗಿ ಯಲಹಂಕ, ಬೊಮ್ಮನಹಳ್ಳಿ, ಮಹಾದೇವಪುರ ಆಸು-ಪಾಸಿನ ಕೆಲ ಹಳ್ಳಿಗಳನ್ನು ಸೇರ್ಪಡೆ ಮಾಡಬೇಕೆಂದು ಶಾಸಕರು ಶಿಫಾರಸು ಮಾಡಿದ್ದರು. ವಾರ್ಡ್‌ಗಳ ಮರುವಿಂಗಡನೆಯಲ್ಲಿ ಹೊಸ ಹಳ್ಳಿಗಳ ಸೇರ್ಪಡೆ ಇಲ್ಲ .
ಮತದಾರರು ಹೆಚ್ಚಿರುವ ಹಳೆ ವಾರ್ಡ್‍ಗಳನ್ನು ಬದಲಿಸಿ ಕೆಲ ಹೊಸ ವಾರ್ಡ್‍ಗಳನ್ನು ಸೃಷ್ಟಿಸುವ ಮೂಲಕ 198 ವಾರ್ಡ್‍ಗಳನ್ನು ಪುನರ್ ವಿಂಗಡಿಸಿದೆ.
40 ರಿಂದ 50,000 ದಷ್ಟು ಅಂದಾಜು ಮತದಾರರ ಸಂಖ್ಯೆಗೆ ಅನುಗುಣವಾಗಿ ವಾರ್ಡ್‍ಗಳನ್ನು ಪುನರ್ ವಿಂಗಡಣೆ ಮಾಡಲಾಗುತ್ತಿದೆ.
ವಾರ್ಡ್ ಪುನರ್ ವಿಂಗಡಣೆ ಅಂತಿಮ ಗೊಂಡಿದ್ದರೂ ವಾರ್ಡ್ ಮೀಸಲಾತಿ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಪಾಲಿಕೆ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದ್ದು ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
PublicNext
11/05/2022 05:04 pm