ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಮು ಸಾಮರಸ್ಯ ಕಾಪಾಡಲು ಸರ್ವಧರ್ಮ ಸೌಹಾರ್ದ ಸಭೆ

ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ RT..ನಗರ ಪ್ಲಬಿಕ್ ಶಾಲೆ ಸಭಾಂಗಣದಲ್ಲಿ RT ನಗರ ಈದ್ಗಾ ಕಮಿಟಿ ವತಿಯಿಂದ ಸರ್ವಧರ್ಮ ಸಮುದಾಯದ ಸೌಹಾರ್ದ ಸಭೆ ಏರ್ಪಡಿಸಲಾಗಿತ್ತು.

ಹೆಬ್ಬಾಳ ಶಾಸಕ ಭೈರತಿ ಸುರೇಶ್, ಸಾಯಿ ಮಂಜುನಾಥ್ ಮಹಾರಾಜ್, ವಿರೋಧ ಪಕ್ಷದ ಮಾಜಿ ನಾಯಕರಾದ ಅಬ್ದುಲ್ ವಾಜಿದ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಆನಂದ್, ಧರ್ಮಗುರುಗಳಾದ ಜಾನ್ಸ್ಸನ್ ವರ್ಗೀಸ್, ಮೌಲನಾ ಮಸೂದ್ ಇಮ್ರಾನ್ ಸಾಬ್, ಹರ್ವಿಂದರ್ ಕಲ್ಸ್, ಪ್ರೋಪೆಸರ್ ರಾಮಚಂದ್ರ, ಮಹಮ್ಮದ್ ಕುನ್ನಿ ಸಾಬ್, ದೀಪ ಬೆಳಗಿಸಿ ಸರ್ವಧರ್ಮ ಸೌಹಾರ್ದ ಸಭೆಗೆ ಚಾಲನೆ ನೀಡಿದರು.

ಹಿಂದೂ ಮುಸ್ಲಿಂ, ಕೈಸ್ತ, ಸಿಖ್, ಬುದ್ದ ಧರ್ಮದವರಿಂದ ಸೌಹಾರ್ದ ಸಂದೇಶ ಸಾರಲಾಯಿತು. ಇದೇ ವೇಳೆ ಶಾಸಕ ಭೈರತಿ ಸುರೇಶ್ ಮಾತನಾಡಿ ಹೆಬ್ಬಾಳ ಕ್ಷೇತ್ರ ಶಾಂತಿ, ಸೌಹಾರ್ದತೆ ಇರುವ ಕ್ಷೇತ್ರ . ಭಾರತ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಹಿಂದೂ, ಮುಸ್ಲಿಂ, ಕೈಸ್ತರು, ಸಿಖ್ ಹೀಗೆ ಎಲ್ಲಾ ಧರ್ಮದವರು ಒಂದೇ.ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಧರ್ಮದ ಲಕ್ಷಾಂತರ ಜನ ಪ್ರಾಣ ಕೊಟ್ಟಿರುವುದಕ್ಕೆ ನಮಗೆ ಸ್ವಾತಂತ್ಯ್ರ ಲಭಿಸಿತು ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್, ಕಾಯಕಯೋಗಿ ಬಸವಣ್ಣ, ಕನಕದಾಸರ ಜಾತ್ಯತೀತ ಸಿದ್ದಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Edited By : PublicNext Desk
Kshetra Samachara

Kshetra Samachara

25/05/2022 06:22 pm

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ