ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಭೂಸ್ವಾಧೀನ ವಿರೋಧಿಸಿ ಕಳೆದ 137 ದಿನಗಳಿಂದ ಶಾಂತಿಯುತ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಗಸ್ಟ್ 15 ರಂದು ರೈತರು ಕಪ್ಪುಪಟ್ಟಿ ಧರಿಸಿ ಸ್ವಾತಂತ್ರ್ಯದ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಡಾ.ಸುಧಾಕರ್ ಭೂಸ್ವಾಧೀನ ಕೈಬಿಡಲು ಆಗ್ರಹಿಸುತ್ತಾರೆ ಎನ್ನಲಾಗಿತ್ತು.
ಸ್ವಾತಂತ್ರ್ಯದ ದಿನ ರೈತರು ಪ್ರತಿಭಟನೆ ಮಾಡಿದರೆ ತೀವ್ರ ಮುಜುಗರ ಆಗುತ್ತೆ ಎಂಬ ಉದ್ದೇಶದಿಂದ ಚನ್ನರಾಯಪಟ್ಟಣ ಪೊಲೀಸರು ಹೋರಾಟದ ಸ್ಥಳಕ್ಕೆ ತೆರಳಿ ಮುಂಜಾನೆ ನಾಲ್ಕುಗಂಟೆ ಸುಮಾರಿಗೆ ರೈತ ಹೋರಾಟಗಾರರನ್ನು ಬಂಧಿಸುವ ವೇಳೆ ಪೋಲನಹಳ್ಳಿಯ ಪ್ರಮೋದ್ ರ ಕಣ್ಣಿಗೆ ಪೊಲೀಸರು ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ದೃಷ್ಟಿ ಮರಳಿ ಬರಬೇಕೆಂದರೆ ಆಪರೇಷನ್ ಮಾಡಿಸಲೇಬೇಕು ಎನ್ನುತ್ತಿದ್ದಾರೆ ಗಾಯಾಳು ಪ್ರಮೋದ್. ವಯಸ್ಸನಿ ಅಂತರವಿಲ್ಲದೆ 71 ರೈತರ ವಿರುದ್ಧ FIR ದಾಖಲಿಸುರುವುದು, ದುರದೃಷ್ಟಕರ. ಕೂಡಲೇ FIR ರದ್ದು ಮಾಡಬೇಕೆಂದು ಪ್ರಗರತಿಪರ ರೈತ ಹೋರಾಟಗಾರರು ಒತ್ತಾಯಿಸಿದ್ದಾರೆ.
ಏನೇ ಆಗಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರ್ಕಾರ ಮಾಡಬಾರದು. ಈಗ ದಾಖಲಾಗಿರುವ FIR ರದ್ದು ಮಾಡಬೇಕು. ಪ್ರಮೋದ್ ಗೆ ಏನೆಲ್ಲಾ ಕಣ್ಣಿನ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿ ರೈತರಿಗೆ ನೆರವಾಗುವ ನಿರ್ಧಾರ ತೆಗೆದುಕೊಳ್ಳಬೇಕು..
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
Kshetra Samachara
18/08/2022 01:14 pm