ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಸ್ತಿ ವಿಚಾರಕ್ಕೆ ಚಾಕು ಇರಿತ: ಮಾಜಿ ಕಾರ್ಪೋರೇಟರ್ ಅಯೂಬ್ ಖಾನ್ ಸಾವು

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿಪ್ಪು ನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಅಯುಬ್ ಖಾನ್‌ಗೆ ಅಣ್ಣನ ಮಗ ಮತೀನ್ ಖಾನ್ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಿನ್ನೆ ಸಂಜೆ 7.30ರಿಂದ 7.45 ರ ವೇಳೆ ನಡೆದಿತ್ತು. ಆಯುಬ್ ಖಾನ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಚಿಕಿತ್ಸೆ ಫಲಿಸದೆ ಆಯುಬ್ ಖಾನ್ ತಡರಾತ್ರಿ ಪ್ರಾಣ ಬಿಟ್ಟಿದ್ದಾನೆ.‌

ಇನ್ನೂ ಘಟನೆಗೆ ಮಸೀದಿ ಅಧ್ಯಕ್ಷ ಪಟ್ಟವೇ ಕಾರಣ ಎಂದು ಆಯುಬ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಟಿಪ್ಪುನಗರದ ಮಸೀದಿಗೆ ಆಯುಬ್ ಅಧ್ಯಕ್ಷನಾಗಿದ್ದ. ಈ ಅಧ್ಯಕ್ಷ ಪಟ್ಟ ಬಿಟ್ಟುಕೊಡುವಂತೆ ಆಯುಬ್ ಅಣ್ಣನ ಮಗ ಮತೀನ್ ಆಗಾಗ ಗಲಾಟೆ ಮಾಡ್ತಿದ್ನಂತೆ. ಇದೇ ವಿಚಾರವಾಗಿ ಈ ಹಿಂದೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.‌ ನಿನ್ನೆ ಕೂಡ ಮತೀನ್ ನೀನು ಸತ್ರೆ ನಾನು ಅಧ್ಯಕ್ಷ ಆಗಬಹುದು ಎಂದು ಚಾಕು ಇರಿದು ಪರಾರಿಯಾಗಿದ್ದ.‌ ಸದ್ಯ ತಲೆ‌ ಮರೆಸಿಕೊಂಡಿರುವ ಮತೀನ್‌ಗಾಗಿ ಚಾಮರಾಜಪೇಟೆ‌ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

Edited By : Nagaraj Tulugeri
PublicNext

PublicNext

14/07/2022 09:40 am

Cinque Terre

22.32 K

Cinque Terre

0