ಬೆಂಗಳೂರು: ನನಗೆ ಆ ಶಾಸಕರಿಂದ ಅನ್ಯಾಯ ಆಗಿದೆ. ದಯವಿಟ್ಟು ನ್ಯಾಯ ಕೊಡಿಸಿ ಎಂದು ಬಿಜೆಪಿ ಶಾಸಕರೊಬ್ಬರ ಮೇಲೆ ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರು ಅವಲತ್ತುಕೊಂಡಿದ್ದಾರೆ.
ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಮೇಲೆ ಮಹಿಳೆ ಆರೋಪಿಸಿದ್ದಾರೆ. ನನಗೆ ಮತ್ತು ನನ್ನ ಮಗುವಿಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೋರಿದ್ದಾರೆ. ಇತ್ತ ಸೇಡಂ ಶಾಸಕ ರಾಜಕುಮಾರ್ ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಆಕೆ ನನ್ನ ಮೇಲೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ದೂರಿನ್ವಯ ವಿಧಾನಸೌಧ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ತನ್ನನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಠಾಣೆಯಲ್ಲಿ ಕಾಂಗ್ರೆಸ್‌ನವರು ಹೇಳಿಕೊಟ್ಟು ಈ ಆರೋಪ ಮಾಡಿಸಿದ್ದಾರೆಂದು ಬರೆದು ಕೊಡುವಂತೆ ಪೊಲೀಸರು ತನ್ನನ್ನು ಒತ್ತಾಯಿಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.ಈ ಎಲ್ಲದರ ಬಗ್ಗೆ ವಕೀಲ ಜಗದೀಶ್ ಜೊತೆ ವಿಡಿಯೋ ಕಾಲ್ ಮೂಲಕ ಮಹಿಳೆ ಪೊಲೀಸರ ಮೇಲೆ ಆರೋಪಿಸುತ್ತಿದ್ದಾರೆ.
PublicNext
07/02/2022 12:44 pm