ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ರಾಗಿ ಖರೀದಿಯಲ್ಲಿ ಸರಕಾರದ ಅಸಡ್ಡೆ ನೀತಿ, ರೊಚ್ಚಿಗೆದ್ದ ರೈತರಿಂದ ವಿಧಾನಸೌಧ ಮುತ್ತಿಗೆ ಹಾಕಲು ಯತ್ನ

ದೊಡ್ಡಬಳ್ಳಾಪುರ : ರಾಗಿ ಖರೀದಿ ಕೇಂದ್ರಗಳಲ್ಲಿ ಅವೈಜ್ಞಾನಿಕ ಮಾನದಂಡಗಳನ್ನ ತೆಗೆದು ಹಾಕಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಟ್ರ್ಯಾಕ್ಟರ್ ನಲ್ಲಿ ಹೊರಟ ರೈತರನ್ನ ಮಾರಸಂದ್ರ ಟೋಲ್ ಬಳಿಯೇ ಪೊಲೀಸರು ತಡೆದಿದ್ದಾರೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ 70 ಹೆಚ್ಚು ರೈತರು ಟ್ರ್ಯಾಕ್ಟರ್ ನಲ್ಲಿ ರಾಗಿ ತುಂಬಿಕೊಂಡು ವಿಧಾನಸೌಧದತ್ತ ಹೊರಟ್ಟಿದ್ದರು, ಆದರೆ ದೊಡ್ಡಬಳ್ಳಾಪುರ ಪೊಲೀಸರು ಯಲಹಂಕ ತಾಲೂಕಿನ ಮಾರಸಂದ್ರ ಟೋಲ್ ಬಳಿಯೇ ರೈತರನ್ನ ತಡೆದಿದ್ದಾರೆ, ಇದರಿಂದ ಅಕ್ರೋಶಗೊಂಡ ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ಸರ್ಕಾರ ರೈತರಿಂದ 7.5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನ ಖರೀದಿಸಿತ್ತು ಆದರೆ ಈ ಬಾರಿ ಸರ್ಕಾರ ರೈತರಿಂದ ಕೇವಲ 2.10 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀಸುವಂತೆ ತಂತ್ರಾಂಶ ರೂಪಿಸಿದೆ, ಇದರಿಂದ 12 ಸಾವಿರ ರೈತರಲ್ಲಿ 6 ಸಾವಿರ ರೈತರಿಗೆ ಮಾತ್ರ ರಾಗಿ ಮಾರಲು ಸಾಧ್ಯವಾಗಿದೆ, ಇನ್ನುಳಿದ ರೈತರಿಗೆ ಅನ್ಯಾಯವಾಗಿದೆ, ಈ ಕೂಡಲೇ ಸರ್ಕಾರ ಖರೀದಿ ಕೇಂದ್ರಗಳಲ್ಲಿನ ತಾರತಮ್ಯ ನೀತಿಯನ್ನ ತೊಲಗಿಸಿ ರೈತರಿಗೆ ನೇರವಾಗಬೇಕೆಂದು ರೈತರು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

14/02/2022 10:01 pm

Cinque Terre

3.45 K

Cinque Terre

0

ಸಂಬಂಧಿತ ಸುದ್ದಿ