ಬೆಂಗಳೂರು: ಪದೇ ಪದೇ ವಿದ್ಯುತ್ ದರ ಏರಿಕೆ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಂತಹ ಶಾಕ್ ನೀಡುತ್ತಿರುವ ಭ್ರಷ್ಟ ಬಿಜೆಪಿ ಸರಕಾರದ ವಿರುದ್ದ ಜನಾಂದೋಲನದ ಅಗತ್ಯವಿದೆ. ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ತುಳುಕುತ್ತಿರುವ ಬಿಜೆಪಿ ಸರಕಾರದ ಆಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಸಂಸದ ಡಿ.ಕೆ ಸುರೇಶ್ ಆಕ್ರೋಶವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಜ್ಞಾನಭಾರತಿ ವಾರ್ಡ್ 48 ನಲ್ಲಿ ಆಟೋ ಸಮಾವೇಶಕ್ಕೆ ಚಾಲನೆ ನೀಡಿ, ಆಟೋ ಚಾಲಕರುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಆಟೋ ಚಾಲಕರು ಕಷ್ಟ ಜೀವಿಗಳು. ತಮ್ಮದೇ ಆದ ಶೈಲಿಯಲ್ಲಿ ಹಗಲಿರುಳು ಸಮಾಜ ಸೇವೆ ಯಲ್ಲಿ ನಿರತರಾಗಿರುವ ವರ್ಗ. ದೇಶದ ಅಭಿವೃದ್ದಿಗೂ ಕೊಡುಗೆಯನ್ನು ನೀಡುತ್ತಿರುವ ಕಾರ್ಮಿಕ ವರ್ಗದ ಪ್ರಮುಖರು ಎಂದರೆ ತಪ್ಪಾಗಲಾರದು. ಭಾರತೀಯ ಜನತಾ ಪಕ್ಷ ಕಳೆದ ಹಲವಾರು ವರ್ಷಗಳ ದುರಾಡಳಿತದಲ್ಲಿ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಜನರ ಜೀವನ ನಡೆಸುವುದನ್ನೇ ದುಸ್ತರವಾಗಿಸಿದೆ ಎಂದರು.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಉಳಿತಾಯವನ್ನ ಜಿಎಸ್‌ಟಿ ರೂಪದಲ್ಲಿ ತನ್ನ ಜೋಬಿಗೆ ತುಂಬಿಕೊಳ್ಳುತ್ತಿದೆ. ಶೇಕಡಾ 40 ರಷ್ಟು ಲಂಚವನ್ನು ತಗೆದುಕೊಳ್ಳುತ್ತಿರುವ ಬಿಜೆಪಿ ಸರಕಾರ ವಿದ್ಯುತ್ ಬೆಲೆಯನ್ನು ಏರಿಸುವ ಮೂಲಕ ಇನ್ನಷ್ಟು ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿದೆ ಎಂದರು.
Kshetra Samachara
24/09/2022 08:52 pm