ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂ.ಡಿ.ಕ್ರಿಸ್ಟಲ್ ಮಾದಕ ವಸ್ತು ಮಾರಾಟ, ಆರೋಪಿ ಬಂಧನ

ಬೆಂಗಳೂರು: ಎಂ.ಡಿ.ಕ್ರಿಸ್ಟಲ್ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಆರೋಪಿಯನ್ನು ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೂನಾಫೀಸ್ ಬಂಧಿತ ಆರೋಪಿ. ಮೂನಾಫೀಸ್ ನು ಮೂಲತಃ ಕೇರಳ ರಾಜ್ಯದವನಾಗಿದ್ದು, ಈ ಹಿಂದೆ 2018 ರಲ್ಲಿ ದುಬೈನಲ್ಲಿ ಎಕ್ಸ್ ಕ್ಯೂಟಿವ್ ಆಗಿ ಕಾರ್ಯನಿರ್ವಸುವ ವೇಳೆ ಇದೇ ಮಾದಕ ವಸ್ತುಗಳ ಮಾರಾಟದಲ್ಲಿ ಮೂರು ವರ್ಷ ಎಂಟು ತಿಂಗಳಗಳ ಕಾಲ ಜೈಲು ವಾಸ ಅನುಭವಿಸಿದ್ದ.

ಆದ್ರೂ ಮಾದಕ ವಸ್ತುಗಳ ಮಾರಾಟದ ಚಾಳಿ ಬೀಡದ ಆರೋಪಿಯು ಬೆಂಗಳೂರಿನ ಬಾಣಸವಾಡಿಯ ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಗೌಪ್ಯವಾಗಿ ಮಾರಾಟ ಮಾಡುತ್ತಿದ್ದನು.ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ 35 ಲಕ್ಷ ರೂಪಾಯಿ ಬೆಲೆಬಾಳುವ 700 ಗ್ರಾಂ.ತೂಕದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

25/08/2022 03:00 pm

Cinque Terre

610

Cinque Terre

0

ಸಂಬಂಧಿತ ಸುದ್ದಿ