ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾಹನಗಳ ಕಳ್ಳತನ, ಆರೋಪಿ ಬಂಧನ

ಬೆಂಗಳೂರು: ಜೀವನದ ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನ ಹಾಗೂ ಕಾರ್ ಗಳನ್ನು ಕದಿಯುತ್ತಿದ್ದ ನಟೋರಿಯಿಸ್ ಕಳ್ಳನನ್ನು ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ..

ಮುನಿರಾಜು ಬಂಧಿತ ಆರೋಪಿ. ಹೊಸಕೋಟೆಯ ಜಡಗೇನಹಳ್ಳಿ ಮೂಲದ ಮುನಿರಾಜು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ವಾಹನಗಳನ್ನು ಕದ್ದು ತಮ್ಮ ತೋಟದ ಮನೆಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದನು..

ವಾಹನಗಳನ್ನು ಮಾರಿದ ಹಣದಲ್ಲಿ ಮೋಜು ಮಸ್ತಿಯ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.. ಇನ್ನೂ ಆರೋಪಿಯಿಂದ ಸುಮಾರು 11 ಲಕ್ಷ ರೂಪಾಯಿ ಬೆಲೆಬಾಳುವ 1 ಕಾರ್, ಹಾಗೂ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ..

ಆರೋಪಿಯ ವಿರುದ್ಧ ಕೆಆರ್ ಪುರ, ಹೆಣ್ಣೂರು, ಬಾಣಸವಾಡಿ, ಯಲಹಂಕ, ಹೊಸಕೋಟೆ, ಮುಳುಬಾಗಿಲು ಸರಹದ್ದಿಗಳಲ್ಲಿ ಪ್ರಕರಣ ದಾಖಲಾಗಿವೆ..

Edited By : PublicNext Desk
Kshetra Samachara

Kshetra Samachara

23/08/2022 12:20 pm

Cinque Terre

650

Cinque Terre

0

ಸಂಬಂಧಿತ ಸುದ್ದಿ