ಬೆಂಗಳೂರು: ಯಾರು ಇಲ್ಲದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯದ ಕುಖ್ಯಾತ ಕಳ್ಳರನ್ನು ವೈಟ್ ಫೀಲ್ಡ್ ವಿಭಾಗದ ಕಾಡುಗುಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ರಾಮಕುಮಾರ್ ಹಾಗೂ ಮಧುಸೂದನ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 230 ಗ್ರಾಂ. ತೂಕದ ಚಿನ್ನದ ಒಡವೆ, 200 ಗ್ರಾಂ. ಬೆಳ್ಳಿ, ಒಂದು ಯಮಹಾ ಆರ್ ದ್ವಿಚಕ್ರ, 4 ಲಕ್ಷ ನಗದು ಹಣ ಸೇರಿದಂತೆ ಒಟ್ಟು 21 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಡಿಗುಡಿ ಪೊಲೀಸರು ಕಾರ್ಯಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆಸಿದ್ದಾರೆ.
Kshetra Samachara
20/08/2022 10:50 am