ಬೆಂಗಳೂರು: ಮಹದೇವಪುರ ಕ್ಷೇತ್ರದ ಜ್ಯೋತಿಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಿಡಿತ ಫೌಂಡೇಶನ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ವಿಶ್ವ ಹಾವುಗಳ ದಿನಚರಣೆಯ ಪ್ರಯುಕ್ತ ' ಹಾವುಗಳೊಂದಿಗೆ ವಿದ್ಯಾರ್ಥಿಗಳು' ಎಂಬ ಶಿಬಿರ ಏರ್ಪಡಿಸಲಾಗಿತ್ತು.
ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಬಹುದೊಡ್ಡದ್ದು, ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಹಾವುಗಳು, ವರ್ಷಕ್ಕೆ ಸಾವಿರಾರು ಇಲಿ ಹೆಗ್ಗಣಗಳನ್ನು ತಿಂದು ರೈತನ ಕೃಷಿ ಉದ್ಪನ್ನಗಳ ಉಳಿಸುವ ಮೂಲಕ ರೈತ ಮಿತ್ರನಾಗಿದೆ ಹಾವುಗಳು.
ನಮ್ಮಲ್ಲಿರುವ ಎಲ್ಲಾ ಹಾವುಗಳು ವಿಷ ಅಲ್ಲ, ಸರ್ವೆ ಸಾಮಾನ್ಯವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣುವ ವಿಷಕಾರಿ ಹಾವುಗಳೆಂದರೆ ನಾಗರಹಾವು, ಕಟ್ಟಹಾವು, ಕೊಳಕು ಮಂಡಲ, ರಕ್ತಮಂಡಲ ಹಾವುಗಳು ಸೇರಿದಂತೆ ಇನ್ನುಳಿದ ಹಾವುಗಳ ನಿರುಪದ್ರವಿಗಳಾಗಿವೆ. ಇಂತಹ ಹಾವುಗಳು ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇದನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯುತ್ತು. ಯಾವುದೇ ಮಾಟಮಂತ್ರಕ್ಕೆ ಮಾರುಹೋಗದೆ, ಮೂಢನಂಬಿಕೆಗಳಿಗೆ ಬಲಿಯಾಗದೆ ಸ್ಥಳೀಯ ಆಸ್ಪತ್ರೆಗೆ ಹಾವು ಕಚ್ಚಿದ ವ್ಯಕ್ತಿಯನ್ನು ಕೆರದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸಿ ಎಂದು ಮಕ್ಕಳಿಗೆ ಅರಿವು ಮೂಡಿಸಿದರು.
ಈ ವೇಳೆ ಉರಗ ಪ್ರೇಮಿ, ಮಿಡಿತ ಫೌಂಡೇಶನ್ ಅಧ್ಯಕ್ಷ ಪರಿಸರ ಮಂಜುನಾಥ್, ಶಾಲಾ ಮುಖ್ಯೋಪಾಧ್ಯಾಯರಾದ ಕ್ರಿಸ್ಟೋಫರ್, ಮಿಡಿತ ಫೌಂಡೇಶನ್ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಪ್ರ.ಕಾರ್ಯದರ್ಶಿ ಸೌಮ್ಯ ಪವರ್, ನೂರಾರು ಶಾಲಾ ಮಕ್ಕಳ ಶಿಬಿರದಲ್ಲಿ ಭಾಗಿಯಾಗಿದ್ದರು.
Kshetra Samachara
20/07/2022 09:50 pm