ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನವೀರನಹಳ್ಳಿಯ ಸರ್ಕಾರಿ ಶಾಲೆಗೆ ಡಿಜಿಟಲ್ ಗ್ರಂಥಾಲಯ ಕೊಡುಗೆ

ದೊಡ್ಡಬಳ್ಳಾಪುರ: ಬೆಂಗಳೂರಿನ ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಸುವರ್ಣ ಮಹೋತ್ಸವದ ಸ್ಮರಣಾರ್ಥ ತಾಲೂಕಿನ  ಸಾಸಲು ಹೋಬಳಿಯ ಚನ್ನವೀರನಹಳ್ಳಿ ಗ್ರಾಮದಲ್ಲಿ ತಿಪ್ಪೂರಿನ ಶ್ರಮಣ ಸಂಸ್ಕೃತಿ ಟ್ರಸ್ಟ್ ಸಹಯೋಗದೊಂದಿಗೆ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆಗೊಳಿಸಲಾಯಿತು.

ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಎಸ್.ಜೆ. ಚಾರ್ಲ್ಸ್ ಲಸ್ರಾಡೋ ಹಾಗೂ ಶಾಸಕ ಟಿ.ವೆಂಕಟರಮಣಯ್ಯ ಅವರು ಡಿಜಿಟಲ್ ಗ್ರಂಥಾಲಯ ಕಟ್ಟಡಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿ ಟಿ.ಎ.ಅಶೋಕ್ ನಗರದ ವಿದ್ಯಾರ್ಥಿಗಳಿಗೆ ಹಳ್ಳಿಯ ವಾತಾವರಣ ಪರಿಚಯಿಸುವ‌ ನಿಟ್ಟಿನಲ್ಲಿ ಎನ್ ಎಸ್ಎಸ್ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ‌ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಈ ಭಾಗದಲ್ಲಿ‌ ಮೂರು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ನಿರ್ಧರಿಸಿದ್ದೇವೆ. ಚನ್ನವೀರನಹಳ್ಳಿ ಗ್ರಾಮದ ಹಳೆಯ ಕಟ್ಟಡವನ್ನು ಪರಿಶೀಲಿಸಿ, ಎಲ್ಲ ರೀತಿಯ ಅಡೆತಡೆಗಳನ್ನು‌ ನಿವಾರಿಸಿ ಗ್ರಂಥಾಲಯ ಕಟ್ಟಡ ನವೀಕರಿಸಲಾಯಿತು. ಗ್ರಾಮಸ್ಥರು, ದಾನಿಗಳ ಸಹಕಾರ, ಕಾಲೇಜಿನ ಎನ್ ಎಸ್ಎಸ್ ನಿಧಿ ಹಾಗೂ ವಿದ್ಯಾರ್ಥಿಗಳು ವೈಯಕ್ತಿಕವಾಗಿ ತಲಾ 250 ದೇಣಿಗೆ ನೀಡಿದರು ಎಂದು ಹೇಳಿದರು.

ಪ್ರತಿ ಶನಿವಾರ ಹಾಗೂ ಭಾನುವಾರ ಕಾಲೇಜಿನ ನಾಲ್ವರು ಎನ್ ಎಸ್ಸೆಸ್ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಇಂಗ್ಲಿಷ್ ಹೇಳಿಕೊಡಲಿದ್ದಾರೆ. ಗ್ರಾಮಾಂತರ‌ ಮಕ್ಕಳಿಗೆ ಬೇಸಿಕ್ ಇಂಗ್ಲಿಷ್ ಜ್ಞಾನ ಸಿಕ್ಕಲ್ಲಿ ಅವರ ನಾಗಾಲೋಟ ಮುಂದುವರಿಯಲಿದೆ. ಚನ್ನವಿರನಹಳ್ಳಿ‌ ಸೇರಿ ಎಂಟು ಗ್ರಾಮಗಳ ವಿದ್ಯಾರ್ಥಿಗಳ ಇದರ ಅನುಕೂಲ ಪಡೆಯಬೇಕು. ಈ ಭಾಗದಿಂದಲೂ ಸಾಕಷ್ಟು ಗೆಜೆಟೆಡ್ ಅಧಿಕಾರಿಗಳು‌ ಬರಬೇಕು ಎಂಬ ಅಭಿಲಾಷೆಯೊಂದಿಗೆ ಕಾಲೇಜಿನ ಎನ್ ಎಸ್ಎಸ್ ಘಟಕ ಈ ಮಹತ್ತರ ಕಾರ್ಯದಲ್ಲಿ ಕೈಜೋಡಿಸಿದೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

18/07/2022 07:16 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ