ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಧ್ಯರಾತ್ರಿ ಒಂಟಿಯಾಗಿ ಓಡಾಡುತ್ತಿದ್ದವರನ್ನು ಗುರಿಯಾಗಿಸಿ ರಾಬರಿ, ಆರೋಪಿಗಳ ಬಂಧನ!

ಬೆಂಗಳೂರು: ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ರಾಬರಿ ಮಾಡುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಗವೊಂದನ್ನು ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಎ1 ಅರವಿಂದ, ಎ2 ವಿಜಯ್, ಎ3 ಸುಬ್ರಹ್ಮಣಿ ಬಂಧಿತ ಆರೋಪಿಗಳು.. ಆರೋಪಿಗಳು ಬೆಳ್ಳಂದೂರು ಠಾಣಾ ವ್ಯಾಪ್ತಿಯ ಕಾರ್ಮೇಲಾರಾಂ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯನ್ನು ಆಟೋ ರಿಕ್ಷಾದಲ್ಲಿ ಹತ್ತಿಸಿಕೊಂಡು ಚಾಕುವಿನಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಪೋನ್ ಪೇ ಮತ್ತು ಪೆಟಿಎಂ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗುತ್ತಿದ್ದರು.

ಆರೋಪಿಗಳಿಂದ 75 ಸಾವಿರ ನಗದು ಹಣ, ವಿವೊ ಫೋನ್, ಬೆಳ್ಳಿಯ ಆಭರಣ ಮತ್ತು ಆಟೋ ರಿಕ್ಷಾವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.. ಈ ಹಿಂದೆ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

Edited By : PublicNext Desk
Kshetra Samachara

Kshetra Samachara

14/07/2022 02:08 pm

Cinque Terre

786

Cinque Terre

0

ಸಂಬಂಧಿತ ಸುದ್ದಿ