ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್ ಬಳಸದಂತೆ ಜಾಗೃತಿ

ಬೆಂಗಳೂರು: ದ್ವಿಚಕ್ರ ವಾಹನ ಸವಾರರು ಇನ್ನೂ ಮುಂದೆ ಅರ್ಧ ಹೆಲ್ಮೆಟ್ ಧರಿಸಿ ಸಂಚಾರ ಮಾಡದಂತೆ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರಾದ ಕೆ.ವಿ ಕೆಂಪಮ್ಮ ಅವರು ಜಾಗೃತಿ ಮೂಡಿಸಿದರು.

ವೈಟ್ ಫೀಲ್ಡ್ ನ ಓಫಾರಂ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಅರ್ಧ ಹೆಲ್ಮೆಟ್ ಬಳಕೆ ಮಾಡದಂತೆ ಸೂಚಿಸಿದರು. ಪ್ರಯಾಣ ಮಾಡುವಾಗ ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ ಅರ್ಧ ಹೆಲ್ಮೆಟ್ ನಿಂದ ತಲೆಗೆ ಯಾವುದೇ ರೀತಿಯಲ್ಲಿ ರಕ್ಷಣೆ ಸಿಗುವುದಿಲ್ಲ.

ಇದರಿಂದಾಗಿ ಸರ್ಕಾರದ ಆದೇಶ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಆದೇಶದ ಮೇರೆಗೆ ತಲೆಯ ಅರ್ಧ ರಕ್ಷ ಕವಚವನ್ನು ರದ್ದು ಮಾಡಲಾಗಿದ್ದು, ಆದ್ದರಿಂದ ವಾಹನ ಸವಾರರು ಇನ್ನೂ ಮುಂದೆ ಇಂತಹ ರಕ್ಷ ಕವಚವನ್ನು ಬಳಸದಂತೆ ಮನವಿ ಮಾಡಿದರು.

ದ್ವಿಚಕ್ರ ವಾಹನ ಸವಾರರು ಒಂದು ವೇಳೆ ಬಳಕೆ ಮಾಡಿದ್ದಲ್ಲಿ ೫೦೦ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಸಲಹೆ ನೀಡಿದರು.

Edited By : PublicNext Desk
Kshetra Samachara

Kshetra Samachara

11/06/2022 12:49 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ