ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: 1ಕಿ.ಮೀ ತಿರಂಗಾ ಜಾಥಾ; ಕಲರವಕ್ಕೆ ಬೆರಗಾದ ಜನ

ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಭಾಗವಾಗಿ ದೇವನಹಳ್ಳಿಲಿ 5000ಕ್ಕು ಹೆಚ್ಚು ಶಾಲಾ ವಿದ್ಯಾರ್ಥಿಗಳು 1ಕಿ.ಮೀ. ರಾಷ್ಟ್ರದ್ವಜ ಹಿಡಿದು ದೇವನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಮೂಲಕ ಜನರಲ್ಲಿ ರಾಷ್ಟ್ರಭಿಮಾನ ಮೂಡಿಸುವಲ್ಲಿ ಯಶಸ್ವಿಯಾದರು. ಹರ್ ಘರ್ ತಿರಂಗಾ ಅಭಿಯಾನದಡಿ ಜಿಲ್ಲಾಡಳಿತ ದೇವನಹಳ್ಳಿ ಹೊಸ ಬಸ್ ನಿಲ್ದಾಣದಿಂದ ತಿರಂಗಾ ಜಾಥಾಕ್ಕೆ ಆರೋಗ್ಯ ಸಚಿವ ಸುಧಾಕರ್ ಚಾಲನೆ ನೀಡಿದರು. ಸಾವಿರಾರು ವಿದ್ಯಾರ್ಥಿಗಳು ಹೊಸ ಬಸ್ಟ್ಯಾಂಡ್, ಹಳೆ ಬಸ್ಟ್ಯಾಂಡ್, ಕೋಟೆ ರಸ್ತೆ, ತಾಲೂಕು ಕಚೇರಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಕಿ.ಮೀ.ಗಟ್ಟಲೆ ಸಾಗಿದ ದ್ವಜ ಜಾಗೃತಿ ಜಾಥಾ ಮತ್ತೆ ದೇವನಹಳ್ಳಿ ಮೈದಾನದಲ್ಲಿ ಸಮಾಪ್ತಿಯಾಯ್ತು. ದೇವನಹಳ್ಳಿ ಮೈದಾನದ ತುಂಬಾ ರಾಷ್ಟ್ರದ್ವಜಗಳ ಪ್ರದರ್ಶನ, ಸಂಗೀತಕ್ಕೆ ತಕ್ಕಂತೆ ದ್ವಜಗಳ ಹಾರಾಟ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ, ಜನರಲ್ಲಿ, ತಾಲೂಕು & ಜಿಲ್ಲೆಯ ಅಧಿಕಾರಿಗಳಲ್ಲಿ ಅದ್ಭಿತವಾದ ರೋಮಾಂಚನ ಮೂಡಿಸಿತು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By :
PublicNext

PublicNext

13/08/2022 05:52 pm

Cinque Terre

12.03 K

Cinque Terre

0

ಸಂಬಂಧಿತ ಸುದ್ದಿ