ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಗ್ಗಲ್ಲೂರು ಗ್ರಾಮದಲ್ಲಿ ಇಂದು ಹೊಸ ರಾಯಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಇಲ್ಲಿನ ಸೂರ್ಯಸಿಟಿ ವ್ಯಾಪ್ತಿಗೆ ಬರುವ ಇಗ್ಗಲೂರು ಗ್ರಾಮದಲ್ಲಿ ಹೊಸ ರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರಗಳನ್ನು ಮಾಡಲಾಗಿತ್ತು.
ಆದ್ರೆ ರಾತ್ರಿ 8 ಗಂಟೆ ಸುಮಾರಿಗೆ ತುಂತುರು ಮಳೆಯಿಂದಾಗಿ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯಾಗಿದ್ದು ಕೆಲ ಗಂಟೆ ಇರಿಸುಮುರಿಸು ಉಂಟಾಗಿತ್ತು. ಇನ್ನು ಸುಮಾರು ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಜಾತ್ರಾಮಹೋತ್ಸವವನ್ನು ರದ್ದು ಮಾಡಿದರು.ಈ ವರ್ಷ ಜಾತ್ರಾ ಮಹೋತ್ಸವನ್ನು ಅದ್ದೂರಿಯಾಗಿ ಮಾಡಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Kshetra Samachara
02/05/2022 11:00 pm