ಬೆಂಗಳೂರು: ಹಗಲು-ರಾತ್ರಿ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರಿನ ರಸ್ತೆಗಳು ತೊಯ್ದು ತೊಪ್ಪೆಯಾಗಿದೆ. ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸಾವರರು ಪರದಾಡಿಕೊಂಡೆ ವಾಹನ ಚಾಲನೆ ಮುಂದುವರೆಸಿದ್ದಾರೆ. ನಗರದ ಪ್ರತಿಷ್ಠಿತ ರಿಚ್ಮಂಡ್ ರಸ್ತೆ ಕೆರೆಯಂತಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ಹರಿದು ಜನರು ಪರದಾಡಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣವಾಗಿರುವ ರಸ್ತೆಯಲ್ಲೆ ಅವ್ಯವಸ್ಥೆ ಮುಂದುವರೆದಿದೆ. ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನಲಾಗ್ತಿದೆ. ಮಳೆ ಬಂದ ಪ್ರತಿ ಬಾರಿ ಈ ರಸ್ತೆಯಲ್ಲಿ ಇದೇ ಸಮಸ್ಯೆ ಉಂಟಾಗುತ್ತಿದೆ.
ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ವಿಧಾನಸೌದ, ಕೆ.ಆರ್ ಸರ್ಕಲ್, ಶಾಂತಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಕೆಂಗೇರಿ, ಜಯನಗರ, ಬಸವನಗುಡಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.ಶಾಂತಿನಗರ, ಡಬಲ್ ರೋಡ್, ಬ್ರಿಗೇಡ್ ರೋಡ್ , ಹಲಸೂರು ರಸ್ತೆ, ಬನಶಂಕರಿ, ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ. ಅವೆನ್ಯೂ ರಸ್ತೆಯು ಮಳೆ ನೀರಿನಿಂದ ಜಲಾವೃತವಾಗಿದೆ. ಸತತ ಮಳೆಯಿಂದ ಬೆಂಗಳೂರಿನ ಘನತೆಗೆ ದೊಡ್ಡಮಟ್ಟದಲ್ಲೇ ಹೊಡೆತಬಿಂದಿದೆ.
Kshetra Samachara
05/09/2022 01:00 pm