ಬೆಂಗಳೂರು: ಮಳೆಯ ಆರ್ಭಟಕ್ಕೆ ನಲುಗಿದ್ದ ಸಿಲಿಕಾನ್ ಸಿಟಿ ಮಂದಿ ಇದೀಗ ಹಾವಿನ ಹಾವಳಿಯಿಂದ ಆತಂಕಕ್ಕೀಡಾಗಿದ್ದಾರೆ. ಮನೆಗಳಲ್ಲಿ, ಅಂಗಡಿಗಳಲ್ಲಿ, ಗಾಡಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಹಾವುಗಳು ಕಾಣಿಸ್ತಾ ಇದ್ದು ಸಿಟಿ ಮಂದಿ ಭಯದಲ್ಲಿದ್ದಾರೆ.
ಹೌದು ನಗರದ ಹೊರಮಾವಿನ ಅಗರ ರಾಜಣ್ಣ ಬಡಾವಣೆಯಲ್ಲಿ ಮನೆಯ ಹೊರಗಡೆ ಇಟ್ಟ ಸಿಲಿಂಡರ್ ಮೆಶ್ ನಲ್ಲಿ ಹಾವು ಕಾಣಿಸಿಕೊಂಡಿದೆ. ನಂತರ ಅದನ್ನ ವನ್ಯಜೀವಿ ಸಂರಕ್ಷಕರಾದ ಮೋಹನ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಹಾಗೇ ಬಾಣಸವಾಡಿಯ ಹೋಟೆಲ್ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿರೋ ಘಟನೆ ನಡೆದಿದೆ. ಸತತ 2 ಗಂಟೆಗಳ ಕಾಲ ಹುಡುಕಾಡಿ ಕೊನೆಗೂ ಹಾವನ್ನು ಹಿಡಿಯಲಾಗಿದೆ. ಇನ್ನು ಇಂದಿರಾನಗರ ಮುಖ್ಯ ರಸ್ತೆ, ಬಿನ್ನಮಂಗಳ ಸಿಗ್ನಲ್ ಜಂಕ್ಷನ್ ಫುಟ್ಪಾತ್ ಮೇಲೂ ಸಹ ಹಾವು ಕಂಡಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ವನ್ಯಜೀವಿ ಸಂರಕ್ಷಕರು ಹೋಗಿ ಹಾವನ್ನ ಹಿಡಿದಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ಮಳೆಯಿಂದ ತೊಂದರೆಯನ್ನು ಅನುಭವಿಸಿ ಹೊರಬರ್ತಿರೋ ಸಿಲಿಕಾನ್ ಸಿಟಿಯಲ್ಲಿ ಇದೀಗ ಹಾವುಗಳ ಕಾಟಕ್ಕೆ ಜನ ಕಂಗಾಲಾಗಿರೋದಂತೂ ನಿಜ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
12/08/2022 01:01 pm