ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ತೊಟ್ಟಿಕಲ್ಲ್ ಜಲಪಾತ ವೈಭವ; ಪ್ರವಾಸಿಗರ ಕಲರವ

ಬೆಂಗಳೂರು : ಮಳೆಯಿಂದಾಗಿ ಆಗುವ ರಸ್ತೆ ರಗಳೆಗಳ ನಡುವೆ ಸಿಲಿಕಾನ್ ಸಿಟಿ ಸನಿಹವೇ ಜಲಪಾತವೊಂದು ಮೈದುಂಬಿ ಹರಿಯುತ್ತಿದೆ.ಹಚ್ಚ ಹಸಿರು ನಡುವೆ ಹೊಸ ಲೋಕವನ್ನೇ ಸೃಷ್ಟಿಸಿದ ಈ ಪ್ರಕೃತಿಯ ಸೂಬಗನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.

ದಟ್ಟ ಕಾನನ ನಡುವೆ ಬೆಟ್ಟಗಳ ಮಧ್ಯೆ ಜುಳು ಜುಳು ಹರಿಯುತ್ತಿರುವ ಈ ಜಲಧಾರೆ ಕಂಡ ಪ್ರವಾಸಿಗರು ಮೈಮರೆತು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಈ ಜಲಪಾತ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಬನ್ನೇರುಘಟ್ಟ ಅರಣ್ಯದಲ್ಲಿದೆ. ಕಾಂಕ್ರೆಟ್ ಕಾಡಿನ ಮಧ್ಯೆ ಇದ್ದ ಜನ ಈ ಜಲಪಾತವನ್ನು ನೋಡಲು ಮುಗಿಬಿದ್ದಿದ್ದಾರೆ.

ಇನ್ನು ಈ ಜಲಪಾತವನ್ನು ಸುವರ್ಣಮುಖಿ ಎಂದು ಸಹ ಕರೆಯಲಾಗುತ್ತದೆ. ಬನ್ನೇರುಘಟ್ಟ ಕಾಡಿನ ತಪ್ಪಲಿನಿಂದ ಉಕ್ಕಿ ಬರುವ ಸುವರ್ಣಮುಖಿ ನದಿ ಸೃಷ್ಟಿಸಿರುವ ಅಪರೂಪದ ಜಲಪಾತವನ್ನು ನೋಡುತ್ತಿರುವ ಪ್ರಕೃತಿ ಪ್ರಿಯರು ಕಾಡಿನ ಸೌದಂರ್ಯವನ್ನು ಕೊಂಡಾಡಿದ್ದಾರೆ.ಒಟ್ಟಿನಲ್ಲಿ ಮಳೆಯಿಂದ ಪರದಾಡುತ್ತಿದ್ದ ಜನ ಪ್ರಕೃತಿಯ ಮಡಿಲಲ್ಲಿ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
PublicNext

PublicNext

18/06/2022 05:35 pm

Cinque Terre

47.38 K

Cinque Terre

0

ಸಂಬಂಧಿತ ಸುದ್ದಿ