ಬೆಂಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ಮತ್ತೊಂದು ಮನೆ ನಸುಕಿನ ಸಮಯದಲ್ಲಿ ನೆಲಕ್ಕೆ ಉರುಳಿದೆ. ಹಲಸೂರಿನ ಲೀಡೋ ಮಾಲ್ ಬಳಿ ಘಟನೆ ಜರುಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಕಳೆದ ರಾತ್ರಿಯೇ ಗೋಡೆ ಕುಸಿಯುವುದನ್ನು ಕಂಡಿದ್ದ ಮನೆ ಮಾಲೀಕ ಹಿಂಬದಿ ಮನೆಯಲ್ಲಿ ಎಲ್ಲರನ್ನೂ ಕರೆದುಕೊಂಡು ವಾಸವಾಗಿದ್ದರು. ನಿರಂತರ ಸುರಿದ ಮಳೆಗೆ ಇಂದು ನಸುಕಿನ ಜಾವಮನೆ ಬಿದ್ದು ಹೋಗಿದೆ. ಇದರಿಂದಾಗಿ ಯಾವುದೇ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಿಬಿಎಂಪಿ ಹಳೇ ಕಟ್ಟಡದ ಲಿಸ್ಟ್ನಲ್ಲಿ ಈ ಮನೆಯೂ ಇರುವ ಮಾಹಿತಿ ದೊರೆತಿದ್ದು, ಶಂಕರ್ ಈ ಮನೆಯ ಮಾಲೀಕನಾಗಿದ್ದಾರೆ. ಕಟ್ಟಡ ಬಿದ್ದ ಹಿನ್ನೆಲೆಯಲ್ಲಿ ಮೂರು ಬೈಕ್ಗಳು ಜಖಂಗೊಂಡಿವೆ.
Kshetra Samachara
19/11/2021 11:41 am