ಅನೇಕಲ್: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ವಾಹನ ಸವಾರರು ಮತ್ತು ನಿವಾಸಿಗಳು ಹೈರಾಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಹೆಡ್ ಮಾಸ್ಟರ್ ಲೇಔಟ್ ನಲ್ಲಿ ಇಂತಹ ದುರಸ್ತಿಗೆ ಸಾಕ್ಷಿಯಾಗಿದೆ.
ಇನ್ನು ಚಂದಾಪುರ ಪುರಸಭೆಯ ವಾರ್ಡ್ ನಂ 20 ರ ಹೆಡ್ ಮಾಸ್ಟರ್ ಬಡಾವಣೆ ರಸ್ತೆಯಲ್ಲೇ ಮಳೆ ನೀರು ನಿಂತು ಓಡಾಡಲು ಜನರು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಾಢ ನಿದ್ರೆಗೆ ಜಾರಿದ್ರ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ ಇನ್ನದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
Kshetra Samachara
12/07/2022 06:05 pm