ದೇವನಹಳ್ಳಿ: ಇವು ಅಂತಿಂತಹ ಹುಣಸೆ ಮರಗಳಲ್ಲ. ಅಧಿಕಾರಿಗಳು 500 ವರ್ಷಗಳ ಹಳೆಯ ಹುಣಸೆ ಮರಗಳೆಂದರೆ, ಸ್ಥಳೀಯ ಗ್ರಾಮಸ್ಥರು 1000 ವರ್ಷಗಳಷ್ಟು ಹಳೆಯವು ಅಂತಾರೆ!
ಇನ್ನು, ಆಲದ ಮರದಲ್ಲಿ ಕಾಣುವ ಬೇರುಗಳು ಕಾಂಡ (ಬುಡ)ಗಳಾಗಿ ಮರ ವಿಸ್ತರಿಸಿ ಅರಳುವ ವಿಶೇಷ ಗುಣವನ್ನು ಈ ಹುಣಸೆ ಮರಗಳಲ್ಲಿ ಕಾಣುತ್ತೇವೆ. ರಾಜ್ಯದಲ್ಲೇ ಅತಿ ಅಪರೂಪದ ಈ ವಿಶೇಷ ಪುರಾತನ ಹುಣಸೆ ತೋಪು ಇರುವುದು ದೇವನಹಳ್ಳಿ ತಾಲೂಕಿನ ನಲ್ಲೂರುಕೋಟೆಯಲ್ಲಿ.
52 ಎಕರೆಯಲ್ಲಿ ಹರಡಿಕೊಂಡಿರುವ ಈ ಹುಣಸೆ ತೋಪಿನಲ್ಲಿ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ Walkthrough ನಿಮಗಾಗಿ...
PublicNext
18/02/2022 10:40 pm