ಬೆಂಗಳೂರು: ಆನೇಕಲ್ ವಕೀಲರ ಸಂಘ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುಂಚೆಯೇ ಮತದಾನದ ಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆನೇಕಲ್ ಹಿರಿಯ ವಕೀಲ ಪಿ.ಜಯರಾಮ್ ರೆಡ್ಡಿ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು. ಆನೇಕಲ್ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ನಿನ್ನೆ (ಭಾನುವಾರ) ಚುನಾವಣೆ ನಡೆಸಲಾಗಿತ್ತು. ಚುನಾವಣಾ ಅಖಾಡದಲ್ಲಿ ಮೂರು ಜನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ರು. ಆನೇಕಲ್ ವಕೀಲರ ಸಂಘ ಬೈಲಾ ಪ್ರಕಾರ ಚುನಾವಣಾಧಿಕಾರಿಗಳಾಗಿ ನಾಲ್ಕು ಜನ ಪೈಕಿ ವಕೀಲ ಜಯರಾಮರೆಡ್ಡಿ ಸಹ ನೇಮಕ ಮಾಡಲಾಗಿತ್ತು. 540 ವಕೀಲರ ಮತದಾರರಿದ್ದು 504 ಮತದಾನ ನಡೆದಿತ್ತು. ಚುನಾವಣೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಪೂರ್ಣ ಪ್ರಮಾಣದ ಫಲಿತಾಂಶ ಪ್ರಕಟ ಮಾಡುವ ಮುಂಚೆಯೇ ಮತದಾನದ ಪತ್ರಗಳನ್ನು ರಾತ್ರೋರಾತ್ರಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಈತನ ವಿರುದ್ಧ ಕೆಲ ವಕೀಲರರು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇನ್ನು ಕೆಲವರು ಮರು ಚುನಾವಣೆ ಮಾಡುವಂತೆ ಒತ್ತಾಯಿಸಿದ್ದು, ಸಂಘದ ಬೈಲಾ ಹಾಗೂ ಕೆಲ ಹಿರಿಯ ವಕೀಲರ ಮಾಹಿತಿ ಪ್ರಕಾರ ಎಷ್ಟೇ ಸಮಯ ಆಗಿದ್ದರೂ ಸಹ ಆ ದಿನವೇ ಚುನಾವಣೆ ಫಲಿತಾಂಶ ಪ್ರಕಟ ಮಾಡಬೇಕಿತ್ತು. ಜಯರಾಮ್ ಜೊತೆಗಿದ್ದ ಮೂರು ಜನ ಚುನಾವಣಾಧಿಕಾರಿ ಗಮನಕ್ಕೆ ತರಬೇಕಿತ್ತು,!? ಎಂದು ವಕೀಲ ಜಯರಾಮ್ ರೆಡ್ಡಿ ವಿರುದ್ಧ ವಕೀಲರು ತಿರುಗಿಬಿದ್ದಿದ್ದಾರೆ.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
25/07/2022 05:17 pm