ವರದಿ- ಗಣೇಶ್ ಹೆಗಡೆ
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈದ್ಗಾ ಮೈದಾನ ನಮ್ಮ ಸ್ವತ್ತು ಎಂದು ಬಿಬಿಎಂಪಿ ಹೇಳುತ್ತಿದ್ದರೆ, ಇದು ವಕ್ಫ್ ಬೋರ್ಡ್ಗೆ ಸೇರಿದ್ದೆಂದು ಮುಸ್ಲಿಂ ಮುಖಂಡರು ವಾದಿಸುತ್ತಿದ್ದಾರೆ. ಈ ಹಿನ್ನೆಲೆ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡುವಂತೆ ವಕ್ಫ್ ಬೋರ್ಡ್ಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿ ಒಂದು ತಿಂಗಳ ಕಾಲ ಅವಕಾಶ ನೀಡಿತ್ತು. ದಾಖಲೆ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಆದರೂ ವಕ್ಫ್ ಬೋರ್ಡ್ ಇದುವರೆಗೆ ಯಾವುದೇ ದಾಖಲೆಗಳನ್ನು ಸಲ್ಲಿಕೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ವಕ್ಫ್ ಬೋರ್ಡ್ ಇದುವರೆಗೂ ಮಾಹಿತಿ, ದಾಖಲೆ ನೀಡದ ಕಾರಣ ರೆವಿನ್ಯೂ ಇಲಾಖೆಗೆ ಬಿಬಿಎಂಪಿಯಿಂದ ವರದಿ ಸಲ್ಲಿಕೆ ಮಾಡಲಾಗುತ್ತದೆ. ರೆವಿನ್ಯೂ ಇಲಾಖೆಯಿಂದ ಪರಭಾರೆ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈದಾನಕ್ಕೆ ಯಾರು ಮಾಲೀಕತ್ವ ಇಲ್ಲದ ಕಾರಣ ಬಿಬಿಎಂಪಿಗೆ ಸುಪರ್ದಿಗೆ ನೀಡುವಂತೆ ಬಿಬಿಎಂಪಿ ವರದಿ ತಯಾರಿಸುತ್ತಿದೆ. ನಂತರ ಬಿಬಿಎಂಪಿ ಹೆಸರಿಗೆ ಮೈದಾನ ನೋಂದಣಿ ಮಾಡಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ.
Kshetra Samachara
13/07/2022 08:19 pm