ಬೆಂಗಳೂರು: ಆರು ವರ್ಷ ಇದ್ದ ಪೊಲೀಸರ ವರ್ಗಾವಣೆಯನ್ನು (ಇನ್‌ಸ್ಪೆಕ್ಟರ್ ಮತ್ತು ಪಿಎಸ್‌ಐ ಹೊರತುಪಡಿಸಿ) ಐದು ವರ್ಷಕ್ಕೆ ಇಳಿಸಿ ಆದೇಶ ಹೊರಡಿಸಿಸೋ ಡಿಸಿಪಿ ನಿಶಾ ಜೇಮ್ಸ್ ಆದೇಶಕ್ಕೆ ಕೆಲವರು ಓಕೆ ಅಂದ್ರೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಐದು ವರ್ಷ ಒಂದು ಠಾಣೆ ಹಾಗೂ 15 ವರ್ಷ ಒಂದೇ ಡಿವಿಜನ್ನಲ್ಲಿ ಕೆಲಸಮಾಡಿದರೆ ಅಂತಹವರನ್ನು ಬೇರೆ ಡಿವಿಜನ್‌ಗೆ ವರ್ಗಾವಣೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ.
ಈ ಆದೇಶಕ್ಕೆ ವಿರೋಧ ವ್ಯಕ್ತವಾಗುತ್ತಿರೋದು ಯಾಕೆ ಅನ್ನೋದನ್ನ ನೋಡೋದಾದ್ರೆ. ಬೇರೆ ದೂರದ ಠಾಣೆ ಅಥವಾ ಡಿವಿಜನ್‌ಗೆ ವರ್ಗಾವಣೆ ಆದ್ರೆ ಮುಖ್ಯವಾಗಿ ಕ್ವಾರ್ಟರ್ಸ್ ಸಮಸ್ಯೆಯಾಗುತ್ತದೆ. ಇನ್ನೂ ಸಿರಿಯಲ್ ಆರ್ಡರ್‌ನಲ್ಲಿ ವರ್ಗಾವಣೆ ಆಗ್ತಿದ್ದು, ಸಾಕಷ್ಟು ಅನಾನುಕೂಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ಪೊಲೀಸರ ವಾದವಾಗಿದೆ. ಮ್ಯೂಚಲ್ ಟ್ರಾನ್ಸ್ಫರ್‌ಗೂ ಹಿರಿಯ ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ಜೊತೆಗೆ ಈಗಾಗಲೇ ಹಲವು ವರ್ಷದಿಂದ ಒಂದೇ ಏರಿಯಾದ ಕ್ವಾರ್ಟರ್ಸ್‌ನಲ್ಲಿರೋ ಪೊಲೀಸರಿಗೆ ಏಕಾಏಕಿ ಬೇರೆ ಡಿವಿಜನ್ ವಿಭಾಗ ಅಥವಾ ದೂರದ ಠಾಣೆಗೆ ಅಲ್ಲಿ ಕ್ವಾರ್ಟರ್ಸ್ ಸಮಸ್ಯೆ ಆಗುತ್ತೆ. ಸದ್ಯ ಹೊಸದಾಗಿ ಬಂದಿರುವ ಪೊಲೀಸರಿಗೆ ಕ್ವಾರ್ಟರ್ಸ್ ಇಲ್ಲ. ಇತ್ತ ಇರೋ ಕ್ವಾರ್ಟರ್ಸ್ ಬಿಟ್ಡು ಹೋದರೆ ಕೆಲಸ ಮಾಡೋ ಅಕ್ಕ ಪಕ್ಕದಲ್ಲಿ ಕ್ವಾರ್ಟರ್ಸ್‌ನ ಹಿರಿಯ ಅಧಿಕಾರಿಗಳು ಒದಗಿಸಿಕೊಡ್ತಾರಾ? ಅಂತ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ. ಇನ್ನೂ ಈಗಷ್ಟೇ ಮಕ್ಕಳನ್ನು ಶಾಲೆಗಳಿಗೆ ಆಡ್ಮಿಷನ್ ಮಾಡಿದ್ದು ವರ್ಗಾವಣೆಯಿಂದ ಮನೆ ಶಿಫ್ಟ್ ಮಾಡುವ ಆಗತ್ಯ ಬಿದ್ದರೆ ಮಕ್ಕಳ ಶಾಲೆ ಬದಲಾವಣೆ ಮಾಡೋಕೆ ಆಗಲ್ಲ ಅಂತಿದ್ದಾರೆ ಪೊಲೀಸ್ ಸಿಬ್ಬಂದಿ.
ದಿನದಲ್ಲಿ 12 ಗಂಟೆ ಕೆಲಸ ಮಾಡೋ ಸಿಬ್ಬಂದಿಗೆ ಪೂರಕ ವಾತಾವರಣ ಕಲ್ಪಿಸೋದು ಬಿಟ್ಟು ಸುಖಾಸುಮ್ಮನೆ ಟ್ರಾನ್ಸ್ಫರ್ ಮಾಡೋದು ಬಿಟ್ಟು, ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡೋ ಅವಕಾಶ ಕಲ್ಪಿಸಲಿ. ಬಂದೋ ಬಸ್ತ್ ಇದ್ರೆ 12 ಗಂಟೆ ಡ್ಯೂಟಿ ಸಮಯ ಇನ್ನೂ ಹೆಚ್ಚಾಗುತ್ತದೆ. ಕೆಲ ಠಾಣೆಗಳಲ್ಲಿ ವೀಕ್ ಆಫ್‌ಕೂಡ ಸಿಕ್ತಿಲ್ಲ. ಇದನ್ನ ಪರಿಹರಿಸಲಿ. ಇನ್ನು ಯಾರಾದ್ರೂ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾದ್ರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಿ. ಬೀಟ್ ಮತ್ತು ಕ್ರೈಂ ಸ್ಟಾಫ್ ಬದಲಾವಣೆ ಮಾಡಲಿ ಎಂದು ಪೊಲೀಸ್ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೆ ಇದ್ರೂ ಸಾಧಕ ಬಾದಕಗಳನ್ನ ಚರ್ಚಿಸಿ ವರ್ಗಾವಣೆ ತೀರ್ಮಾನ ಕೈಗೊಂಡ್ರೆ ಒಳ್ಳೆದು ಅನ್ನೋದು ಪಬ್ಲಿಕ್ ಆಗ್ರಹ.
PublicNext
25/06/2022 11:56 am