ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಲೇಶ್ವರಂನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸ್ ಇಲಾಖೆಯಿಂದ ನೋಟೀಸ್

ಬೆಂಗಳೂರು : ದೇವಸ್ಥಾನದಲ್ಲಿ ಮೈಕ್ ಬಳಸದಂತೆ ನೋಟಿಸ್ ನೀಡಲಾಗಿದ್ದು, ಮಲ್ಲೇಶ್ವರಂನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಸಮಯದಲ್ಲಿ ಗಂಟೆ ಬಾರಿಸಿ, ಮಂತ್ರ ಹೇಳಿ, ವಾದ್ಯ ಶಬ್ದ ಮಾಡದಂತೆ ಪೊಲೀಸ್ ಇಲಾಖೆಯಿಂದ ನೋಟೀಸ್ ನೀಡಲಾಗಿದೆ.

ಈ ಬಗ್ಗೆ ಮಲ್ಲೇಶ್ವರಂ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ನರಸಿಂಹ ಭಟ್ಟ ಮಾತನಾಡಿ ದೇವಸ್ಥಾನದಲ್ಲಿ ಗಂಟೆ ಬಾರಿಸದೇ, ಮಂತ್ರ ಹೇಳದೇ ಪೂಜೆ ಮಾಡಲು ಸಾಧ್ಯವೇ ಇಲ್ಲ. ನೂರಾರು ವರ್ಷ ಗಳಿಂದ ಈ ದೇವಸ್ಥಾನದಲ್ಲಿ ಹಿಂದೂ ಧರ್ಮದ ಆಚರಣೆ ನಡೆಯುತ್ತಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ ಆಯ್ತು ಗೊತ್ತಿಲ್ಲ.

ನಮ್ಮ ದೇವಸ್ಥಾನದಲ್ಲಿ ಇಲ್ಲಿಯವರೆಗೂ ಮೈಕ್ ಬಳಸಿಲ್ಲ, ನಾವು ಹೇಳುವ ಮಂತ್ರ, ವಾದ್ಯದ ಶಬ್ದ ಗೇಟ್ ನಿಂದ ಹೊರಗೂ ಕೇಳಿಸುವುದಿಲ್ಲ. ಮಂತ್ರ ಹೇಳದೇ, ಗಂಟೆ ಬಾರಿಸದೇ ಪೂಜೆ ಮಾಡಿದ್ರೆ ಅದು ದೇವರ ಆರಾಧನೆ ಆಗಲ್ಲ, ಭೂತದ ಆರಾಧನೆ ಆಗತ್ತೆ. ಯಾರೋ ಮೌಖಿಕವಾಗಿ ದೂರು ನೀಡಿದ್ದಾರಂತೆ, ಆದ್ರೆ ಯಾರು ನೀಡಿದ್ದಾರೆ ಗೊತ್ತಿಲ್ಲ.ನಿತ್ಯ ದೇವಸ್ಥಾನಕ್ಕೆ ಸಾವಿರಾರು ಜನರು ಬರುತ್ತಾರೆ. ಏಪ್ರಿಲ್ 9 ಕ್ಕೆ ಮಲ್ಲೇಶ್ವರಂ ಪೋಲಿಸ್ ಠಾಣೆಯಿಂದ ನೋಟೀಸ್ ಬಂದಿದೆ ಎಂದು ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/04/2022 04:51 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ